ಛಾಯಾಗ್ರಹಣ ಬಂದ್ ಪ್ರತಿಭಟನೆ

ಮೂಲ್ಕಿ: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ಆಶ್ರಯದಲ್ಲಿ ಸರ್ಕಾರದ ಕಾರ್ಮಿಕ ಸೌಲಭ್ಯಗಳನ್ನು ಪಡೆಯುವ ಬೇಡಿಕೆಗಾಗಿ ರಾಜ್ಯದಾದ್ಯಂತ ಶನಿವಾರ ಹಮ್ಮಿಕೊಳ್ಳಲಾದ ಒಂದು ದಿನದ ಶಾಂತಿಯುತ ಛಾಯಾಗ್ರಹಣ ಬಂದ್ ಪ್ರತಿಭಟನೆಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಮೂಲ್ಕಿ ವಲಯದ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಕ್ಷಿಕೆರೆ. ಮೂಲ್ಕಿ ಕಾರ್ನಾಡಿ ಪ್ರದೇಶದ ಛಾಯಾಗ್ರಾಹಕರು ಸಂಘಟಿತರಾಗಿ ಕಿನ್ನಿಗೋಳಿ ಯುಗಪುರುಷದಿಂದ ಕಿನ್ನಿಗೋಳಿ ಪೇಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ ಪಾವಂಜೆ ಮಾರ್ಗವಾಗಿ ಮೂಲ್ಕಿಗೆ ಬಂದು ವೀಶೇಷ ಮನವಿ ಪತ್ರವನ್ನು ಮೂಲ್ಕಿ ನಾಡ ಕಛೇರಿಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಮತ್ತು ವಿಶೇಷ ತಹಶೀಲ್ದಾರ್ ಮೊಹಮ್ಮದ್ ನಿಸಾರ್ ರವರಿಗೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಮೂಲ್ಕಿ ವಲಯದ ಮಾಜಿ ಅಧ್ಯಕ್ಷ ನವೀನ್ ಕಟೀಲು, ಅಸಂಘಟಿತ ಕಾರ್ಮಿಕರಾದ ಛಾಯಾಚಿತ್ರ ಗ್ರಾಹಕರಿಗೆ ರಕ್ಷಣೆಯಾಗಿ ಸರ್ಕಾರ ಕಾರ್ಮಿಕರ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ವಿಶೇಷ ತಹಶೀಲ್ದಾರ್ ಮೊಹಮ್ಮದ್ ನಿಸಾರ್ ಶಾಂತಿಯುತವಾಗಿ ಹಾಗೂ ಮಾದರಿಯಾಗಿ ನಡೆಸಿದ ಪ್ರತಿಭಟನೆ ಪ್ರಶಂಶನಾರ್ಹವಾಗಿದೆ. ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖೇನ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು. ಮೂಲ್ಕಿ ಮಲಯದ ಅಧ್ಯಕ್ಷ ರಾಫಾಯಲ್ ರೆಬೆಲ್ಲೊ, ಕಾರ್ಯದರ್ಶಿ ಅರುಣ್ ಉಲ್ಲಂಜೆ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

Kinnigoli-02071601

Comments

comments

Comments are closed.

Read previous post:
Kinnigoli-01071606
ಪಾದೂರು ಪೈಪ್ ಲೈನ್ : ಕೃಷಿ ಭೂಮಿ ಹಾನಿ

ಕಿನ್ನಿಗೋಳಿ: ಪಾದೂರು ಪೈಪ್ ಲೈನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ...

Close