ಇನ್ನರ್‌ವೀಲ್ ಜಿಲ್ಲಾ ಅಧಿವೇಶನ ಚಿಗುರು

ಕಿನ್ನಿಗೋಳಿ :ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಪ್ರಯತ್ನದ ಜೊತೆಗೆ ಕ್ರೀಯಾಶೀಲತೆಯನ್ನು ಮಹಿಳೆಯರು ಬೆಳೆಸಿಕೊಂಡು ಸಂಘಟಿತರಾಗಿ ಸಮಾಜಮುಖಿ ರಚನಾತ್ಮಕ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಇನ್ನರ್‌ವೀಲ್ ಅಸೋಸಿಯೇಷನ್ ಅಧ್ಯಕ್ಷೆ ಪ್ರಭಾ ರಘುನಂದನ್ ಹೇಳಿದರು.
ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ಭಾನುವಾರ ನಡೆದ ಎಂಟು ಕಂದಾಯ ಜಿಲ್ಲೆಯನ್ನೊಳಗೊಂಡ ಇನ್ನರ್‌ವೀಲ್ ಕ್ಲಬ್ ಜಿಲ್ಲೆ 318ರ 47ನೇ ಜಿಲ್ಲಾ ಅಧಿವೇಶನ ಚಿಗುರು ಹಾಗೂ2016-17 ನೇ ಸಾಲಿನ ನೂತನ ಜಿಲ್ಲಾ ಚೆಯರ್‌ಮನ್ ಚಿತ್ರಾ ವಿ ರಾವ್ ತಂಡಕ್ಕೆ ಅಧಿಕಾರ, ಪ್ರತಿಜ್ಞಾ ಬೋಧನೆ ಹಾಗೂ ಚೆಯರ್‌ಮನ್ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸ್ನೇಹ ಮತ್ತು ಸೇವೆಯನ್ನು ನಮ್ಮ ಧ್ಯೇಯವಾಗಿಟ್ಟುಕೊಂಡು ಸಂಘ ಸಂಸ್ಥೆಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದು ರೋಟರಿ 3182 ರ ಜಿಲ್ಲಾ ಗವರ್ನರ್ ಡಿ.ಎಸ್. ರವಿ ಇನ್ನರ್‌ವೀಲ್ ಜಿಲ್ಲಾ ಡೈರಕ್ಟರಿ 2016-17 ಬಿಡುಗಡೆಗೊಳಿಸಿ ಮಾತನಾಡಿದರು.
ಮಹಿಳೆ ಅಬಲೆಯಲ್ಲ, ಸಂಘಟಿತರಾಗಿ ಸಂಘಟನಾ ಬಲದೊಂದಿಗೆ ನಾಯಕತ್ವಗುಣಗಳನ್ನು ಬೆಳೆಸಿ ಇತರರನ್ನು ಸುಶಿಕ್ಷಿತರನ್ನಾಗಿಸಿ ಆರ್ಥಿಕ ಹಿನ್ನಡೆ ಹೊಂದಿದವರಿಗೆ ಬೆಂಗಾವಲಾಗಿ ನಿಂತಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದು 2016-17 ನೇ ಸಾಲಿನ ಇನ್ನರ್‌ವೀಲ್ ಜಿಲ್ಲಾ ಚೆಯರ್‌ಮನ್ ಚಿತ್ರಾ ವಿ ರಾವ್ ಹೇಳಿದರು.
ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆಗೈದ ಕ್ಲಬ್‌ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
೨೦೧೫-೧೬ ನೇ ಸಾಲಿನ ಜಿಲ್ಲಾ ಚೆಯರ್‌ಮನ್ ಸುಧಾ ಪ್ರಸಾದ್, ಇನ್ನರ್‌ವೀಲ್ ಎಸಿ ಸದಸ್ಯೆ ವಿನಿತಾ ಸತೀಶ್, ಜಿಲ್ಲಾ ಕಾರ್ಯದರ್ಶಿ ವಾರಿಜಾ ಜಗದೀಶ್, ಕೋಶಾಧಿಕಾರಿ ಸಾರಿಕ ಪ್ರಸಾದ್, ಇಎಸ್‌ಒ ಸುಮನ ಭರತ್, ಜಿಲ್ಲಾ ಸಂಪಾದಕಿ ಅನುರಾಧ ನಂದಕುಮಾರ್, ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಪ್ರೀತಿ ಶೆಟ್ಟಿ, ಕಾರ್ಯದರ್ಶಿ ವಿಮಲಾ ತ್ಯಾಗರಾಜ್, ಅಸೆಂಬ್ಲಿ ಕಾರ್ಯದರ್ಶಿ ಸುಧಾ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಇನ್ನರ್‌ವೀಲ್ ಅಸೆಂಬ್ಲಿ ಚೆಯರ್‌ಮನ್ ಶಾಲೆಟ್ ಪಿಂಟೋ ಸ್ವಾಗತಿಸಿದರು. 2016-17 ನೇ ಸಾಲಿನ ಜಿಲ್ಲಾ ಉಪ ಚೆಯರ್‌ಮನ್ ಜಯಶ್ರೀ ಎಂ. ವಂದಿಸಿದರು. ಮಾಜಿ ಜಿಲ್ಲಾ ಚೆಯರ್‌ಮನ್ ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03071601 Kinnigoli-03071602 Kinnigoli-03071603 Kinnigoli-03071604

 

 

Comments

comments

Comments are closed.

Read previous post:
Kinnigoli-02071601
ಛಾಯಾಗ್ರಹಣ ಬಂದ್ ಪ್ರತಿಭಟನೆ

ಮೂಲ್ಕಿ: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ಆಶ್ರಯದಲ್ಲಿ ಸರ್ಕಾರದ ಕಾರ್ಮಿಕ ಸೌಲಭ್ಯಗಳನ್ನು ಪಡೆಯುವ ಬೇಡಿಕೆಗಾಗಿ ರಾಜ್ಯದಾದ್ಯಂತ ಶನಿವಾರ ಹಮ್ಮಿಕೊಳ್ಳಲಾದ ಒಂದು ದಿನದ ಶಾಂತಿಯುತ ಛಾಯಾಗ್ರಹಣ ಬಂದ್ ಪ್ರತಿಭಟನೆಗೆ...

Close