ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕಿದಿಯೂರು ಡಾ. ಗುರುರಾಜ ಭಾಗವತ ರಚಿತ ‘ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ’ ಪುಸ್ತಕವನ್ನು ಬುಧವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅನಾವರಣಗೊಳಿಸಿದರು. ಪರ್ಯಾಯ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕರ್ನಾಟಕ ಸಂಸ್ಕೃತ ವಿ. ವಿ. ಕುಲಸಚಿವ ಪ್ರೊ. ಸಿದ್ದೇಗೌಡ, ದ. ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದೇವಪ್ರಸಾದ ಪುನರೂರು, ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ನಯನಾಭಿರಾಮ ಉಡುಪ, ಲೇಖಕ ಡಾ. ಕಿದಿಯೂರು ಗುರುರಾಜ ಭಾಗವತ ಉಪಸ್ಥಿತರಿದ್ದರು.

Kinnigoli-03071605

Comments

comments

Comments are closed.

Read previous post:
Kinnigoli-03071602
ಇನ್ನರ್‌ವೀಲ್ ಜಿಲ್ಲಾ ಅಧಿವೇಶನ ಚಿಗುರು

ಕಿನ್ನಿಗೋಳಿ :ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಪ್ರಯತ್ನದ ಜೊತೆಗೆ ಕ್ರೀಯಾಶೀಲತೆಯನ್ನು ಮಹಿಳೆಯರು ಬೆಳೆಸಿಕೊಂಡು ಸಂಘಟಿತರಾಗಿ ಸಮಾಜಮುಖಿ ರಚನಾತ್ಮಕ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಇನ್ನರ್‌ವೀಲ್ ಅಸೋಸಿಯೇಷನ್ ಅಧ್ಯಕ್ಷೆ ಪ್ರಭಾ...

Close