ತುಳು ಭಾಷಾಭಿಮಾನ ಉಳಿಯಬೇಕು

ಮೂಲ್ಕಿ: ತಾಯಿಯ ಸ್ಥಾನಮಾನವನ್ನು ಹೊಂದಿರುವ ತುಳು ಭಾಷೆಯ ಅಭಿಮಾನದಿಂದ ಸ್ವಾಭಿಮಾನದ ಬದುಕನ್ನು ಹೊರರಾಜ್ಯದಲ್ಲಿದ್ದವರು ಅರಿತಿದ್ದರು, ತುಳು ನಾಡಿನಲ್ಲಿರುವವರಲ್ಲಿ ಈ ಕೊರತೆ ಎದ್ದುಕಾಣುತ್ತಿದೆ, ತುಳು ಸಮ್ಮೇಳನದ ಮೂಲಕ ಭಾಷೆ, ಸಂಸ್ಕೃತಿ, ಸಂಸ್ಕಾರ, ಭವಿಷ್ಯದ ಯುವ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು ಎಂದು ಮಂಬಯಿ ಸೇವಾ ಭಾರತಿಯ ಸಂಸ್ಥಾಪಕ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ ಹೇಳಿದರು.
ಅವರು ಟೈಮ್ಸ್ ಆಫ್ ಕುಡ್ಲದ ತುಳು ಪತ್ರಿಕೆದ ನಾಲ್ಕನೇ ವರ್ಷದ ನೆನಪಿಗಾಗಿ ಮೂಲ್ಕಿಯಲ್ಲಿ ಆಗಸ್ಟ್ 13 ಮತ್ತು 14 ರಂದು ನಡೆಯುವ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಶುಭವಾಗಲಿ ಕಟ್ಟಡದಲ್ಲಿ ಭಾನುವಾರ ಸಮ್ಮೇಳನದ ಲಾಂಛನವನ್ನು ಅಧಿಕೃತವಾಗಿ ಅನಾವರಣಗೊಳಿಸಿ ಮಾತನಾಡಿದರು.
ಮೂಲ್ಕಿ ತುಳು ಸಮ್ಮೇಳನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿ, ಮೂಲ್ಕಿಯ ಇತಿಹಾಸದ ಗತವೈಭವವನ್ನು ಮರೆಯಾಗುತ್ತಿರುವುದನ್ನು ಇದರೊಂದಿಗೆ ವಿಮರ್ಶೆ ನಡೆಸಬೇಕು, ತುಳುನಾಡಿನ ಕೊಂಡಿಯಂತಿರುವ ಪ್ರದೇಶದಲ್ಲೇ ಸಮ್ಮೇಳನ ನಡೆಸುತ್ತಿರುವುದು ಅವಿಸ್ಮರಣೀಯವಾಗಬೇಕು ಎಂದರು.
ಸಮ್ಮೇಳನದ ಅಂಗವಾಗಿ ಪ್ರಾಯೋಜಿಸಿದ ಅದೃಷ್ಟಯೋಜನೆಯನ್ನು ಲಯನ್ಸ್‌ನ ವಲಯಾಧ್ಯಕ್ಷ ದೇವಪ್ರಸಾದ ಪುನರೂರು ಬಿಡುಗಡೆಗೊಳಿಸಿ ಮಾತನಾಡಿ, ಯುವಜನರು ತುಳುವಿನತ್ತ ಚಿಂತನೆ ನಡೆಸುವಂತಾಗಬೇಕು, ಸಮ್ಮೇಳನವು ನೆಲ-ಜಲ-ಸಂಸ್ಕಾರ-ಸಂಸ್ಕೃತಿಯ ಭದ್ರ ಬುನಾದಿಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮೂಲ್ಕಿ, ಸಮಿತಿಯ ರತ್ನಾವತಿ ರಂಜನ್, ಶಾಂಭವಿ ಶೆಟ್ಟಿ, ಹರಿಶ್ಚಂದ್ರ ಸಾಲ್ಯಾನ್, ಬಬಿತಾ ಶೆಟ್ಟಿ, ನಾಗೇಶ್ ಬಪ್ಪನಾಡು, ಭಾರತೀ ರೈ, ಮಟ್ಟಿ ಲಕ್ಷ್ಮೀ ನಾರಾಯಣರಾವ್ ಇನ್ನಿತರರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ಎಸ್.ಆರ್.ಬಂಡಿಮಾರ್ ಸ್ವಾಗತಿಸಿದರು. ಸಮ್ಮೇಳನದ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಪ್ರಸ್ತಾವನೆಗೈದರು, ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ ಮೂಲ್ಕಿ ಸಮ್ಮೇಳನ ಆಶಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ವಿ.ಕೆ.ಯಾದವ್ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

ತುಳುನಾಡಿನ ಲಾಂಛನ…
ತುಳು ಸಮ್ಮೇಳನ ಲಾಂಛನವು ಸಮ್ಮೇಳನ ನಡೆಯುವ ಸ್ಥಳದ ಬಪ್ಪನಾಡು ಡೋಲು, ನಾಗದೇವರು, ಕಲ್ಪವೃಕ್ಷದ ಸಿಯಾಳ, ದೈವ-ದೇವರು, ಎಲೆ ಅಡಿಕೆ, ಹಿಂಗಾರ, ಬಾಳೆಹಣ್ಣು, ತಾಳೆಗರಿಯಲ್ಲಿ ತುಳು ಲಿಪಿ, ಸಮ್ಮೇಳನವನ್ನು ನಡೆಸುತ್ತಿರುವ ಟೈಮ್ಸ್ ಆಫ್ ಕುಡ್ಲದ ಪಂಚಾಂಗವು ಹೊಂದಿದೆ, ಭತ್ತದ ಕಣಜವನ್ನು ಗೆರೆಸೆಯಿಂದ ಬುಟ್ಟಿಗೆ ಹಾಕುವ ಮೂಲಕ ವಿಶಿಷ್ಠವಾಗಿ ಅನಾವರಣಗೊಳಿಸಲಾಯಿತು.

Mulki-07071603

Comments

comments

Comments are closed.

Read previous post:
Kinnigoli--080716011
ಈದುಲ್ ಫಿತರ್ ಆಚರಣೆ

ಕಿನ್ನಿಗೋಳಿ: ಈದುಲ್ ಫಿತರ್ ಆಚರಣೆ ಪುನರೂರು ಮುಹಮ್ಮದಿಯಾ ಜುಮ್ಮಾ ಮಸೀದಿ ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿ

Close