ಜನಾಕರ್ಷಣೆಯ ಮುಂಡ ಬೀಚ್

ಮೂಲ್ಕಿ: ಮುಂಗಾರು ಆಗಮನದ ಬಳಿಕ ಪ್ರಕೃತಿ ಹರಿದ್ವರ್ಣಗೊಳ್ಳುತ್ತಿದ್ದಂತೆ ಮಳೆ ಬಿರುಗಾಳಿಯ ಆರಂಭ. ನೆರೆ ನೀರು ಸಮುದ್ರ ಪ್ರವೇಶಿಸಿ ಕೆಂಪು ಮತ್ತು ಕಡು ಕಪ್ಪು ವರ್ಣದೊಂದಿಗೆ ಪ್ರಕ್ಷುಬ್ರ ಸ್ಥಿತಿಯಲ್ಲಿ ಆಳೆತ್ತರದ ಅಲೆಗಳೊಂದಿಗೆ ದಡಕ್ಕೆ ಅಪ್ಪಳಿಸುವ ಭೀಭಸ್ಸ ನೋಟ ಈ ಅಲೆಗಳ ನಡುವೆ ಹೊಟ್ಟೆಪಾಡಿಗಾಗಿ ಮೀನು ಹಿಡಿಯುವ ಮೀನುಗಾರರು ಹಲವು ಇವು ರಾಷ್ಟ್ರೀಯ ಮಟ್ಟದ ಸರ್ಪಿಂಗ್ ಚಾಂಪಿಯನ್‌ಶಿಪ್ ಸ್ಪರ್ದೆ ನಡೆದ ಸಸಿಹಿತ್ಲು ಮುಂಡ ಪ್ರದೇಶದ ಪ್ರಸ್ತುತ ನೋಟ
ಸಮುದ್ರ ಪ್ರಕ್ಷುಬ್ರಗೊಂಡು ಬಿರುಗಾಳಿ ಆರಂಭದ ಬಳಿಕ ಆಳ ಮತ್ತು ನಾಡದೋಣಿ ಮೀನುಗಾರಿಕೆ ನಿಶೇದ ಈ ಕಾರಣಗಳಿಂದಾಗಿ ಸಮುದ್ರ ಮೀನುಗಾರಿಕೆಗೆ ಹೋಗಲಾಗದ ಮೀನುಗಾರರು ದಿನದ ಖರ್ಚು ವೆಚ್ಚ ಹಾಗೂ ಮನೆಯ ಉಪಯೋಗಕ್ಕಾಗಿ ಬೀಸು ಬಲೆ ಮೀನುಗಾರಿಕೆ ಮಾಡುತ್ತಾರೆ.
ಬೀಸು ಬಲೆ: ತೆಳ್ಳಗಿನ ನೈಲಾನ್ ನೂಲುಗಳಿಂದ ಮಾಡಲಾದ ಈ ಬಲೆಯ ಗುಚ್ಚದ ಕೆಳಗೆ ಸೀಸದ ಮಣಿಗಳನ್ನು ಪೋಣಿಸಿ, ತುದಿಗೆ ಉದ್ದ ನೈಲಾನ್ ನೂಲು ಬಳಸಲಾಗುತ್ತದೆ. ಈ ಬಲೆ ಬೀಸಲೂ ಬಹಳ ಪರಿಣತಿ ಅಗತ್ಯ ಅನುಭವ ಇಲ್ಲದವರು ಬೀಸಿದರೆ ನೀರಿಗೆ ಬೀಳುವ ಬದಲು ತಾನೇ ಬಲೆಗೆ ಸಿಲುಕಲು ಸಾಧ್ಯ ಎನ್ನುತ್ತಾರೆ ಮೀನುಗಾರರು. ಮಳೆಗಾಲದ ಗಾಳಿಯ ಹೊಡೆತಕ್ಕೆ ಮೇಲೆ ಬಂದಿರುವ ಮೀನುಗಳು ಅಳಿವೆಯ ಮುಖಾಂತರ ನದಿಗೆ ಬರುತ್ತದೆ ನೆರೆ ನೀರು ಬರುವ ಕಾರಣ ನೀರಿನ ಬಣ್ಣ ಬದಲಾಗುವುದರಿಂದ ಬಲೆಯ ಬಗ್ಗೆ ತಿಳಿಯದ ಮೀನು ನೇರವಾಗಿ ಬಲೆಗೆ ಸಿಲುಕುತ್ತದೆ. ನೀರಿನ ಹರಿವಿನ ವಿರುದ್ದ ಬಲೆ ಬೀಸಿ ಎಳೆಯುವ ಮೂಲಕ ಮೀನು ಹಿಡಿಯಲಾಗುತ್ತದೆ. ಬೇರೆ ಬೇರೆ ಜಾತಿ ಮೀನು ಬಲೆಗೆ ಬೀಳುವುದರಿಂದ ಲಾಭವಿದೆ ಎನ್ನುತ್ತಾರೆ ಮೀನುಗಾರರು.
ಗಿರಾಕಿಗಳೂ ಹಲವು: ತಾಜಾ ಮೀನಿಗಾಗಿ ಹಂಬಲಿಸುವ ಗಿರಾಕಿಗಳೂ ಬಹಳಷ್ಟು ಇದ್ದಾರೆ. ಸಮುದ್ರ ತೀರದಲ್ಲಿ ವಿಹಾರಿಗಳಾಗಿ ಬಂದವರೂ ಮೀನು ನೋಡಿ ಕೊಂಡು ಹೋಗುತ್ತಾರೆ. ಇನ್ನು ಉಳಿದರೆ ಮನೆಯ ಖರ್ಚಿಗೆ ಇಲ್ಲವಾದರೆ ದಿನವಿಡೀ ಹಿಡಿದ ಮೀನು ಫ್ರೀಜರ್‌ನಲ್ಲಿ ಶೇಖರಿಸಿ ಮರುದಿನ ಮಾರ್ಕೆಟಿಗೆ ಹಾಕಲಾಗುತ್ತದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.
ಹವಾಮಾನಕ್ಕೆ ತಕ್ಕಂತೆ ಕಷ್ಟ ಜೀವಿಯಾಗಿ ತಮ್ಮ ಬದುಕನ್ನು ರೂಪಿಸುವ ಮೀನುಗಾರರು ಕೆಲವೊಮ್ಮೆ ಅಧಿಕ ಮೀನುಗಳು ಲಭ್ಯವಾದರೆ ಕೆಲವು ದಿನಗಳು ಮೀನುಗಳು ಸಿಗದೇಯೂ ಇರುವ ಸಾದ್ಯತೆಗಳಿವೆ. ಮೀನುಗಾರಿಕೆಯನ್ನೇ ನಂಬಿ ಬದುಕುವ ಕಷ್ಟ ಜೀವಿಗಳಿಗೆ ಈ ಪ್ರದೇಶ ಪ್ರವಾಸೋದ್ಯಮದಿಂದ ಬೆಳಗಿದಲ್ಲಿ ಮುಂದಿನ ಪೀಳೀಗೆ ಆರಾಮದಾಯಕವಾಗಿ ಬದುಕು ಕಂಡುಕೊಳ್ಳಲು ಸಾಧ್ಯ.

ಬೆಳಿಗಿನ ಗಾಳಿಯ ದಿಕ್ಕು ನೋಡಿ ಮೀನುಗಾರಿಕೆ ಆರಂಭಿಸಿದ್ದೇನೆ ಸ್ವಲ್ಪ ಮೀನು ಲಭಿಸಿದೆ ಒಳ್ಳೆಯ ಮೀನು ಲಭಿಸಲು ದಿನವಿಡೀ ಬಲೆ ಹಾಕುವ ಕಾರ್ಯ ನಡೆಯುತ್ತದೆ. . .
ಈಶ್ವರ ಸಸಿಹಿತ್ಲು. . ಮೀನುಗಾರರು.

ನಂದಿನಿ ಮತ್ತು ಶಾಂಭವಿ ನದಿ ಸೇರುವ ಸಂಗಮ ಸ್ಥಳ ಇಲ್ಲಿ ಮೀನುಗಳೂ ಅಧಿಕ ಗಾಳಿ ಹೆಚ್ಚಾಗಿದ್ದರೆ ಮೀನುಗಳೂ ಅಧಿಕ ಸಂಖ್ಯೆಯಲ್ಲಿ ಸಿಗುತ್ತದೆ.
ರಾಮಕೃಷ್ಣ ಸಸಿಹಿತ್ಲು ಮೀನುಗಾರರು.

Mulki-07071602

Comments

comments

Comments are closed.

Read previous post:
Mulki-05071602
ಉಚಿತ ಜಂತುಹುಳ ನಿವಾರಣಾ ಔಷಧಿ

ಮೂಲ್ಕಿ: ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ(ನಿ) ಆಶ್ರಯದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಹಯೋಗದಲ್ಲಿ ಉಚಿತ ಜಂತುಹುಳ ನಿವಾರಣಾ ಔಷಧಿಯನ್ನು ಹಾಲು ಉತ್ಪಾದಕರಿಗೆ ವಿತರಿಸಲಾಯಿತು. ಈ...

Close