ಬಿ.ಕೆ.ಶ್ರೀಮತಿ ರಾವ್‌ರವರಿಗೆ ಕೊ.ಅ.ಉಡುಪ ಪ್ರಶಸ್ತಿ

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ, ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಬಿ.ಕೆ.ಶ್ರೀಮತಿ ರಾವ್ ಇವರಿಗೆ ನೀಡಲಾಗುವುದು. ಗುರುಪ್ರಿಯ ನಾಮಾಂಕಿತದಿಂದ ಹೆಸರುವಾಸಿಯಾಗಿರುವ ಇವರ ಸುಮಾರು 32ಕ್ಕೂ ಮಿಕ್ಕಿ ಕೃತಿಗಳು ಪ್ರಕಟಗೊಂಡಿದೆ. ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕೊ.ಅ.ಉಡುಪ ಪ್ರಶಸ್ತಿಯನ್ನು ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Kinnigoli--080716013

Comments

comments

Comments are closed.

Read previous post:
Kinnigoli--080716012
ಕಟೀಲು – ಪಾಠ್ಯೇತರ ತರಗತಿಗಳ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಿಪ್ರೈಮರಿ ಶಾಲೆಯಲ್ಲಿ ಮುಂಬೈನ ಹಂಸ ಧ್ವನಿ ಸೇವಾ ಟ್ರಸ್ಟ್ ವತಿಯಿಂದ...

Close