ಕಟೀಲು ಬಲ್ಲಾಣ ಬಳಿ ಲಾರಿ ಬಸ್ಸು ಡಿಕ್ಕಿ

 ಕಿನ್ನಿಗೋಳಿ : ಕಟೀಲು ಚರ್ಚ್ ಸಮೀಪದ ಬಲ್ಲಾಣ ತಿರುವು ಬಳಿ ಶುಕ್ರವಾರ ಕಟೀಲಿನಿಂದ ಕಿನ್ನಿಗೋಳಿಗೆ ಬರುತ್ತಿದ್ದ ಖಾಸಗಿ ಬಸ್ಸು ಹಾಗೂ ಕಿನ್ನಿಗೋಳಿಯಿಂದ ಕಟೀಲಿಗೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ವಾಹನ ಚಾಲಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅರ್ಧ ತಾಸು ಸಂಚಾರ ಅಸ್ತವ್ಯಸ್ತವಾಗಿತ್ತು. ಬಜಪೆ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಬಲ್ಲಾಣ ರಸ್ತೆ ತಿರುವು ಹಾಗೂ ಇಕ್ಕಾಟ್ಟಾದ ರಸ್ತೆಯಾಗಿದ್ದು ಈ ಪರಿಸರದಲ್ಲಿ ಹಲವು ವರ್ಷಗಳಿಂದ ಅಪಘಾತ ನಡೆಯುತ್ತಲೇ ಇದ್ದು, ಪ್ರತಿ ಮಳೆಗಾಲದಲ್ಲಿ ಸಣ್ಣಪುಟ್ಟ ಅಪಘಾತ ನಡೆಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಮೂರುಕಾವೇರಿಯಿಂದ ಕಟೀಲುವರೆಗೆ ಹಲವಾರು ಹೇರ್ ಪಿನ್ ತಿರುವುಗಳಿದ್ದು ಅಪಘಾತ ವಲಯವೆಂದೇ ಪ್ರಸಿದ್ದಿಯಾಗಿವೆ.
ಆತ್ರಾಡಿ-ಮಂಗಳೂರು ರಾಜ್ಯ ಹೆದ್ದಾರಿ ಇದಾಗಿದ್ದು ಆದಷ್ಟು ಬೇಗ ರಸ್ತೆಯ ಅಗಲೀಕರಣ ಹಾಗೂ ಕೆಲವು ಕಡೆಗಳಲ್ಲಿ ತಡೆ ಗೋಡೆ ನಿರ್ಮಾಣ ಮಾಡಿದರೆ ಅಪಘಾತವನ್ನು ತಪ್ಪಿಸಬಹುದು.

Kinnigoli--080716016 Kinnigoli--080716015 Kinnigoli--080716014

Comments

comments

Comments are closed.