ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಂಘಟನೆ, ಉಳಿತಾಯ ಮನೋಭಾವನೆ ಹುಟ್ಟು ಹಾಕಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ. ಎಂದು ಕಟೀಲು ದೇವಳ ಪದವಿ ಕಾಲೇಜು ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಡುಗೋಡು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಿನ್ನಿಗೋಳಿ ವಲಯದಿಂದ ವರ್ಗಾವಣೆಗೊಂಡ ಮೇಲ್ವಿಚಾರಕ ಸತೀಶ್ ಕೆ ಅವರನ್ನು ಸನ್ಮಾನಿಸಲಾಯಿತು.
ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಕರುಣಾಕರ ಶೆಟ್ಟಿ , ಸುನಂದ ಕೆರ್ಕೇರಾ, ನಿಕಟಪೂರ್ವ ಅಧ್ಯಕ್ಷ ವಾಸು ಸಾಲ್ಯಾನ್, ನೂತನ ಅಧ್ಯಕ್ಷೆ ಮೀರಾ ಮತ್ತಿತರರು ಉಪಸ್ಥಿತರಿದ್ದರು.
ಸುಶೀಲ ಸ್ವಾಗತಿಸಿ ಸೇವಾಪ್ರತಿನಿಧಿ ಸುರೇಖಾ ವರದಿ ವಾಚಿಸಿದರು. ಯೋಗೀಶ್ ಆಚಾರ್ ವಂದಿಸಿದರು. ಮೇಲ್ವಿಚಾರಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli--08071608

Comments

comments

Comments are closed.

Read previous post:
Kinnigoli--08071607
ತೋಕೂರು ಐಟಿಐ ವಿದ್ಯಾರ್ಥಿ ವೇತನ

ಕಿನ್ನಿಗೋಳಿ: ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಕೌಶಲ್ಯಭರಿತ ಪರಿಣಿತಿ ಪಡೆಯಬೇಕಾದರೆ ಕಠಿನ ಪರಿಶ್ರಮ, ಶೃದ್ಧೆ ಮತ್ತು ಸಮರ್ಪಣಾಭಾವ ಮುಖ್ಯ ಎಂದು ಮುಲ್ಕಿ ಮೂಡಬಿದ್ರೆ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ...

Close