ಮಳೆಗೆ ಕೊಚ್ಚಿ ಹೋದ ಮೈಲೊಟ್ಟು ರಸ್ತೆ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮಪಂಚಾಯತಿಯ ಪಂಜಿನಡ್ಕದಿಂದ ಮೈಲೊಟ್ಟುಗೆ ಹೋಗುವ ಪ್ರಧಾನ ರಸ್ತೆ ಮೊದಲ ಮಳೆಗೆ ಕೊಚ್ಚಿಹೋಗಿದ್ದು ಮೈಲೊಟ್ಟು ಬಸ್ಸು ನಿಲ್ದಾಣದ ಬಳಿ ಬೃಹದಾಕಾರದ ಹೊಂಡ ಮೈಲೊಟ್ಟಿಗೆ ಬರುವವರನ್ನು ಸ್ವಾಗತಿಸುತ್ತಿದೆ.
ಕಳೆದ ವರ್ಷಗಳ ಹಿಂದೆ ಮೈಲೊಟ್ಟಿನಿಂದ ಪಂಜಿನಡ್ಕದವರೆಗೆ ಎರಡು ಹಂತಗಳಲ್ಲಿ ಡಾಮರೀಕರಣ ನಡೆದಿತ್ತು. ಅದರಲ್ಲಿ ಮೈಲೊಟ್ಟಿನಿಂದ ಸುಮಾರು ಒಂದು ಕಿಮೀ ರಸ್ತೆ ಡಾಮರೀಕರಣ ಕಳಪೆಯಾಗಿದ್ದು ಅಲ್ಲಲ್ಲಿ ಹೊಂಡ ಬಿದ್ದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷಗಳ ಹಿಂದೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಮಂಗಳೂರಿನ ಕೂಳೂರು ಮೂಲದ ಗುತ್ತಿಗೆದಾರರೊಬ್ಬರು ಕಳಪೆ ಕಾಮಗಾರಿ ನಡೆಸಿದ್ದು ಆರಂಭದಲ್ಲೇ ಅಪಸ್ವರ ಉಂಟಾಗಿತ್ತು. ಇದೀಗ ಭಾರೀ ಮಳೆಗೆ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಠಿಯಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ. ಮೈಲೊಟ್ಟಿನ ಹಾಲಿನ ಸೊಸೈಟಿ ಬಳಿಯೂ ರಸ್ತೆ ಹದಗೆಟ್ಟಿದ್ದು ಕೂಡಲೇ ಪಂಚಾಯತಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Mulki-08071606

Comments

comments

Comments are closed.

Read previous post:
Mulki-08071605
ಅಂತರ್‌ಶಾಲಾ ಜಿಲ್ಲಾ ಬ್ಯಾಡ್ಮಿಂಟನ್

ಮೂಲ್ಕಿ: ಹಳೆಯಂಗಡಿ ಲೈಟ್‌ಹೌಸ್ ಟಾರ್ಪೆಡೋಸ್ ಸ್ಪೋಟ್ಸ್ ಕ್ಲಬ್ ಆಯೋಜಿಸಿರುವ ಜಿಲ್ಲಾ ಮಟ್ಟದ ಅಂತರ್ ಶಾಲಾ ಬ್ಯಾಡ್ಮಿಂಟನ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಲೂಡ್ಸ್ ಸೆಂಟ್ರಲ್ ಸ್ಕೂಲ್ ಮಂಗಳೂರು...

Close