ವನಮಹೋತ್ಸವ

ಮೂಲ್ಕಿ: ಪ್ರಕೃತಿ ರಕ್ಷಣೆಯಾದರೆ ಮಾತ್ರ ನಾಡು ಸುಭೀಕ್ಷವಾಗಲು ಸಾಧ್ಯ ಎಂಬ ಧ್ಯೇಯ ಧೋರಣೆಯನ್ನು ಮನದಲ್ಲಿಟ್ಟು ಹೋಂಗಾರ್ಡ್ ವತಿಯಿಂದ ಜಿಲ್ಲೆಯಾಧ್ಯಂತ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೋಂಗಾರ್ಡ್ಸ್ ದ.ಕ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿಮೋಹನ್ ಚೂಂತಾರು ಹೇಳಿದರು.
ಮೂಲ್ಕಿ ಗಾಂಧಿ ಮೈದಾನದ ಬಳಿ ಹೋಂಗಾರ್ಡ್ಸ್ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ನಡೆಸಲಾದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸಂಸ್ಥೆಯ ವತಿಯಿಂದ ಪ್ರತೀ ಘಟಕಗಳ ಸಂಯೋಜನೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಶಾಲೆ ಕಾಲೇಜುಗಳನ್ನು ಮತ್ತು ಸಂಘ ಸಂಸ್ಥೆಗಳನ್ನು ಗಿಡಗಳನ್ನು ನೆಟ್ಟು ಬೆಳೆಸುವಂತೆ ಮಾಹಿತಿ ನೀಡಲಾಗುವುದು ಮಾತ್ರವಲ್ಲ ಹೋಂಗಾರ್ಡ್ಸ್ ತಂಡ ನೆಟ್ಟಿರುವ ಗಿಡಗಳು ಹೇಗಿವೆ ಎಂದು ಪರಿಶೀಲಿಸಲಾಗುವುದು ಎಂದರು. ಈ ಸಂದರ್ಭ ಮೂಲ್ಕಿ ಘಟಕದ ಅಧಿಕಾರಿ ಮನ್ಸೂರ್ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು. ಘಟಕಾಧಿಕಾರಿ ಮನ್ಸೂರ್ ಸ್ವಾಗತಿಸಿ ವಂದಿಸಿದರು.

Mulki-08071602

Comments

comments

Comments are closed.

Read previous post:
Mulki-08071601
ತೋಕೂರು: ವನಮಹೋತ್ಸವ

ಮೂಲ್ಕಿ: ಗ್ರಾಮೀಣ ವಲಯದಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಿ ರಾಷ್ಟ್ರ ಮಟ್ಟದ ಯುವ ಪ್ರತಿಭೆಗಳನ್ನು ಹುಟ್ಟುಹಾಕುವುದರೊಂದಿಗೆ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಸ್ತುತ್ಯರ್ಹ ಎಂದು ಮಾಜಿ...

Close