ಅಂತರ್‌ಶಾಲಾ ಜಿಲ್ಲಾ ಬ್ಯಾಡ್ಮಿಂಟನ್

ಮೂಲ್ಕಿ: ಹಳೆಯಂಗಡಿ ಲೈಟ್‌ಹೌಸ್ ಟಾರ್ಪೆಡೋಸ್ ಸ್ಪೋಟ್ಸ್ ಕ್ಲಬ್ ಆಯೋಜಿಸಿರುವ ಜಿಲ್ಲಾ ಮಟ್ಟದ ಅಂತರ್ ಶಾಲಾ ಬ್ಯಾಡ್ಮಿಂಟನ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಲೂಡ್ಸ್ ಸೆಂಟ್ರಲ್ ಸ್ಕೂಲ್ ಮಂಗಳೂರು ಮತ್ತು ಶಾರದಾ ವಿದ್ಯಾಲಯ ಮಂಗಳೂರು ಟಾರ್ಪೆಡೋಸ್ ಅಂತರ್‌ಶಾಲಾ ಜಿಲ್ಲಾ ಬ್ಯಾಡ್ಮಿಂಟನ್ ಸಮಗ್ರ ಪ್ರಶಸ್ತಿ ಪಡೆದವು.
ಉದ್ಘಾಟನೆ: ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೋರೇಟರ್ ಪ್ರತಿಭಾ ಕುಲಾಯಿ ಸ್ಪರ್ದಾಕೂಟ ಉದ್ಘಾಟಿಸಿ, ಕ್ರೀಡೆಯಲ್ಲಿ ಸಾಧನೆ ಗೈಯಲು ವೃತ್ತ್ತಿಪರ ತರಬೇತಿ ಅಗತ್ಯ ಎಳೆವೆಯಲ್ಲಿಯೇ ವಿದ್ಯಾರ್ಥಿಗಳನ್ನು ಉತ್ತಮ ತರಬೇತಿ ಹಾಗೂ ಸ್ಪರ್ದಾತ್ಮತೆಯನ್ನು ಮೂಡಿಸಿದಲ್ಲಿ ವಿಶ್ವ ಮಟ್ಟದ ತಾರೆಯರನ್ನಾಗಿ ಬೆಳಗಿಸಲು ಸಾಧ್ಯ ಎಂದರು.
ಅತಿಥಿಯಾಗಿದ್ದ ನಾಗಭೂಷಣ ರೆಡ್ಡಿ ಮಾತನಾಡಿ, ಕ್ರೀಡೆಯಲ್ಲಿ ಪರಿಣಾಮಕಾರಿ ಭಾಗವಿಸುವಿಕೆ ಬಹಳ ಮುಖ್ಯ ಸ್ಪರ್ದಾತ್ಮಕ ಚಟುವಟಿಕೆಗಳು ಉತ್ತಮವಾಗಿದ್ದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾ ತಾರೆಗಳಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಟಾರ್ಪೆಡೋಸ್ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಸ್ವಾಗತಿಸಿ ಸ್ಪರ್ದೆಯ ಬಗ್ಗೆ ಮಾಹಿತಿ ನೀಡಿದರು. ತರಬೇತುದಾರರಾದ ವಿವೇಕ್ ವಂದಿಸಿದರು.
ಫಲಿತಾಂಶ: 14 ವರ್ಷ ವಯೋಮಿತಿ ಬಾಲಕರು: ಪ್ರಥಮ ಸೈಂಟ್ ಅಲೋಶಿಯಸ್ ಶಿರ್ವ. ದ್ವಿತೀಯ ಶಾರದಾ ವಿದ್ಯಾಲಯ ಮಂಗಳೂರು.
14 ವರ್ಷ ವಯೋಮಿತಿ ಬಾಲಕಿಯರು:ಪ್ರಥಮ: ಲೂಡ್ಸ್ ಸೆಂಟ್ರಲ್ ಸ್ಕೂಲ್ ಮಂಗಳೂರು ದ್ವಿತೀಯ: ಡೆಲ್ಲಿ ಪಬ್ಲಿಕ್ ಸ್ಕೂಲ್ ಎಂ.ಆರ್.ಪಿ.ಎಲ್ ಮಂಗಳೂರು.
17 ವರ್ಷ ವಯೋಮಿತಿ ಬಾಲಕರು: ಪ್ರಥಮ: ಲೂಡ್ಸ್ ಸೆಂಟ್ರಲ್ ಸ್ಕೂಲ್ ಮಂಗಳೂರು. ದ್ವಿತೀಯ: ಶಾರದಾ ವಿದ್ಯಾಲಯ ಮಂಗಳೂರು.
17 ವರ್ಷ ವಯೋಮಿತಿ ಬಾಲಕಿಯರು:ಪ್ರಥಮ: ಶಾರದಾ ವಿದ್ಯಾಲಯ ಮಂಗಳೂರು. ದ್ವಿತೀಯ ಲೇಡಿಹಿಲ್ ವಿಕ್ಟೋರಿಯಾ ಗಲ್ಸ್ ಹೈಸ್ಕೂಲ್ ಮಂಗಳೂರು.

Mulki-08071605

Comments

comments

Comments are closed.

Read previous post:
Mulki-08071604
ಪವಿತ್ರ ರಂಝಾನ್

ಮೂಲ್ಕಿ: ವೀಶೇಷ ದಾನ ಧರ್ಮಗಳ ಗುಣ ಮೌಲ್ಯ ಸಹಿತವಾಗಿ ಬಡವರ ಹಸಿವಿನ ಕಷ್ಟದ ಬಗ್ಗೆ ಅರಿವು ನೀಡುವ ಪವಿತ್ರ ರಂಝಾನ್ ಉಪವಾಸದ ಆಚರಣೆಯಾಗಿದೆ ಎಂದು ಮೂಲ್ಕಿ ಕಾರ್ನಾಡು...

Close