ಪವಿತ್ರ ರಂಝಾನ್

ಮೂಲ್ಕಿ: ವೀಶೇಷ ದಾನ ಧರ್ಮಗಳ ಗುಣ ಮೌಲ್ಯ ಸಹಿತವಾಗಿ ಬಡವರ ಹಸಿವಿನ ಕಷ್ಟದ ಬಗ್ಗೆ ಅರಿವು ನೀಡುವ ಪವಿತ್ರ ರಂಝಾನ್ ಉಪವಾಸದ ಆಚರಣೆಯಾಗಿದೆ ಎಂದು ಮೂಲ್ಕಿ ಕಾರ್ನಾಡು ಮಸ್ಜಿದೇ ನೂರ್ ಮಸೀದಿಯ ಧರ್ಮಗುರುಗಳಾದ ಬದ್ರುದ್ದೀನ್ ದಾರಿಮಿಯವರು ಹೇಳಿದರು.
ಮೂಲ್ಕಿ ಕಾರ್ನಾಡಿ ಸಿ.ಎಸ್.ಐ ಸಮೂಹ ವಿದ್ಯಾ ಕೇಂದ್ರದ ಆಶ್ರಯದಲ್ಲಿ ನಡೆದ ರಂಝಾನ್ ಆಚರಣೆಯ ಸಂದರ್ಭ ವಿದ್ಯಾರ್ಥಿಗಳಿಗೆ ಹಬ್ಬದ ಸಂದೇಶ ನೀಡಿ ಮಾತನಾಡಿದರು.
ನಿಮ್ಮ ನೆರೆಮನೆಯವರ ಕಷ್ಟಕ್ಕೆ ಮೊದಲು ಸ್ಪಂದಿಸಿ ಎಂದು ಹೇಳಿದ ಪ್ರವಾದಿಯವರ ಮಾತಿನಂತೆ ಕಷ್ಟದಲ್ಲಿರುವವರಿಗೆ ಸಹಕಾರ ನೀಡುವಾಗ ಯಾವುದೇ ಧರ್ಮ ಜಾತಿ ಅಡ್ಡ ಬರಬಾರದು ಪವಿತ್ರ ರಂಝಾನ್ ಹಬ್ಬದ ದಿನ ಯಾರುಕೂಡಾ ಅನ್ನ ಆಹಾರವಿಲ್ಲದೆ ಸಂಕಷ್ಟ ಪಡಬಾರದು ಎಂಬ ನೆಲೆಯಲ್ಲಿ ದಾನ ಧರ್ಮಾದಿಗಳನ್ನು ನಡೆಸಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಉತ್ತಮ ಮಹತ್ವ ನೀಡಿ ಸಾಧಕರಾಗಿ ಬೆಳೆಯಬೇಕು ಶಿಕ್ಷಣದೊಂದಿಗೆ ಗುರು ಹಿರಿಯರಿಗೆ ಗೌರವ ನೀಡುವ ಗುಣಗಳು ಮತ್ತು ಶಿಸ್ತಿನಿಂದ ಕೂಡಿದ ಜೀವನ ನಿಮ್ಮದಾಗಬೇಕು.ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚಿನ ಸಭಾ ಪಾಲಕರಾದ ರೆ.ಎಡ್ವರ್ಡ್ ಕರ್ಕಡ ರವರು ಮಾತನಾಡಿ, ಪ್ರತೀ ಧರ್ಮದಲ್ಲಿಯೂ ಮಾನವೀಯತೆಯ ಸಾರವನ್ನು ತಿಳಿಸಿಕೊಡುದರಿಂದ ಪ್ರತಿಯೋಬ್ಬರೂ ಪ್ರತೀ ಧಾರ್ಮಿಕ ಹಬ್ಬಗಳ ವೀಶೇಷತೆಯನ್ನು ತಿಳಿಯಲು ಪ್ರಯತ್ನಿಸಿ ಒಬ್ಬರನ್ನೋಬ್ಬರು ಗೌರವಿಸುವ ಜೊತೆಗೆ ಸಂಘಟಿತರಾಗಿ ಸಾಮರಸ್ಯದಿಂದ ಸಹಕಾರಿಗಳಾಗಿ ಬಾಳಬೇಕು ಎಂದರು.
ಈ ಸಂದರ್ಭ ಅತಿಥಿಗಳಾಗಿಮಸ್ಜಿದೇ ನೂರ್ ಮಸೀದಿಯ ಧರ್ಮಗುರು ಹೈದರ್ ಮುಸ್ಲಿಯಾರ್, ಶಾಲಾ ಸಂಚಾಲಕರಾದ ಪ್ರೊ.ಸ್ಯಾಮ್ ಮಾಬೆನ್ ಮತ್ತು ರಂಜನ್ ಜತ್ತನ್ನಾ, ಸಿ.ಎಸ್.ಐ ಆಂಗ್ಲಮಾದ್ಯಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಉಮಾವತಿ ಮತ್ತು ಯುಬಿಯಂಸಿ ಕನ್ನಡ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಗ್ಲಾಡಿಸ್ ಸುಕುಮಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಮೀಲಾ ಸ್ವಾಗತಿಸಿದರು. ರೆಹೆನಾ ನಿರೂಪಿಸಿದರು. ಫಲಾಕ್ ವಂದಿಸಿದರು.

Mulki-08071604

Comments

comments

Comments are closed.