ತೋಕೂರು ಐಟಿಐ ವಿದ್ಯಾರ್ಥಿ ವೇತನ

ಕಿನ್ನಿಗೋಳಿ: ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಕೌಶಲ್ಯಭರಿತ ಪರಿಣಿತಿ ಪಡೆಯಬೇಕಾದರೆ ಕಠಿನ ಪರಿಶ್ರಮ, ಶೃದ್ಧೆ ಮತ್ತು ಸಮರ್ಪಣಾಭಾವ ಮುಖ್ಯ ಎಂದು ಮುಲ್ಕಿ ಮೂಡಬಿದ್ರೆ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ರಾಮಕೃಷ್ಣ ಪೂಂಜ ದತ್ತಿನಿಧಿಯಿಂದ ನೀಡುವ ಬೃಹತ್ ಮೊತ್ತ ಹಾಗೂ ಸರಕಾರದಿಂದ ಕೊಡಮಾಡಿದ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಇಲಾಖೆ ಕೊಡಮಾಡಿದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತ್ತಾ
ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ಮುಲ್ಕಿ ರಾಮಕೃಷ್ಣ ಪೂಂಜ ಐಟಿಐ ನಲ್ಲಿ ಶುಕ್ರವಾರ ನಡೆದ ೨೦೧೫-೨೦೧೬ನೇ ಸಾಲಿನ ವಿವಿಧ ದತ್ತಿನಿಧಿಗಳಿಂದ ಪ್ರಾಯೋಜಿಸಲ್ಪಟ್ಟ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಿಟ್ಟೆ ಎನ್.ಎಮ್.ಎ.ಎಮ್. ಇಂಜಿನಿಯರ್ ಕಾಲೇಜು ಮುಖ್ಯ ಲೈಬ್ರೇರಿಯನ್ ಯಾಜೀ ಡಾ| ಎಚ್. ದಿವಾಕರ್ ಭಟ್, ಮುಲ್ಕಿ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಮಂಜುನಾಥ್, ಡಾ| ಬಿ.ಹೆಚ್.ರಾಘವ ರಾವ್, ಪೂಂಜ ದತ್ತಿನಿಧಿಯ ವಿಶ್ವಸ್ಥ , ಉದ್ಯಮಿ ಎಮ್. ಎಚ್. ಅರವಿಂದ ಪೂಂಜಾ ಉಪಸ್ಥಿತರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲ್ಯಾನ್ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ವಿಶ್ವನಾಥ್ ರಾವ್ ಪ್ರಸ್ತಾವನೆಗೈದರು. ಸಂಜೀವ ದೇವಾಡಿಗ ವಂದಿಸಿದರು. ಲಕ್ಷ್ಮೀಕಾಂತ ಕಾರ್ಯಕ್ರಮ ನಿರೂಪಿಸಿದರು.

Kinnigoli--08071607

Comments

comments

Comments are closed.

Read previous post:
Mulki-08071606
ಮಳೆಗೆ ಕೊಚ್ಚಿ ಹೋದ ಮೈಲೊಟ್ಟು ರಸ್ತೆ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮಪಂಚಾಯತಿಯ ಪಂಜಿನಡ್ಕದಿಂದ ಮೈಲೊಟ್ಟುಗೆ ಹೋಗುವ ಪ್ರಧಾನ ರಸ್ತೆ ಮೊದಲ ಮಳೆಗೆ ಕೊಚ್ಚಿಹೋಗಿದ್ದು ಮೈಲೊಟ್ಟು ಬಸ್ಸು ನಿಲ್ದಾಣದ ಬಳಿ ಬೃಹದಾಕಾರದ ಹೊಂಡ ಮೈಲೊಟ್ಟಿಗೆ ಬರುವವರನ್ನು ಸ್ವಾಗತಿಸುತ್ತಿದೆ....

Close