ತೋಕೂರು: ವನಮಹೋತ್ಸವ

ಮೂಲ್ಕಿ: ಗ್ರಾಮೀಣ ವಲಯದಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಿ ರಾಷ್ಟ್ರ ಮಟ್ಟದ ಯುವ ಪ್ರತಿಭೆಗಳನ್ನು ಹುಟ್ಟುಹಾಕುವುದರೊಂದಿಗೆ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಸ್ತುತ್ಯರ್ಹ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿಯ ತೋಕೂರು ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿವಾಗಿ ಮುಂದುವರಿದಂತೆ ಕ್ರೀಡೆಯಲ್ಲಿಯೂ ಸಾಧಕರಾದರೆ ಜೀವನದಲ್ಲಿ ಅತ್ಯುನ್ನತ ಪದವಿಯ ಸಹಿತ ಕ್ರೀಡಾ ತಾರೆಗಳಾಗಿ ಬೆಳಗಲು ಸಾಧ್ಯ ವಿದ್ಯಾರ್ಥಿಗಳಿಗೆ ಎಳೆ ವಯಸ್ಸಿನಲ್ಲಿ ಕ್ರೀಡೆಯ ಜೊತೆಗೆ ಪರಿಸರದ ಬಗ್ಗೆ ಖಾಳಜಿ ಶಿಸ್ತು ಹಾಗೂ ಉತ್ತಮ ಸಂಸ್ಕಾರ ನೀಡುವ ಕಾರ್ಯ ನಡೆಸುತ್ತಾ ಬರುತ್ತಿರುವ ಕ್ರೀಡಾ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು. ಈ ಸಂದರ್ಭ ಟೇಬಲ್‌ಟೆನ್ನಿಸ್ ರಾಜ್ಯ ಪ್ರತಿಭೆ ಇಶಾನಿ ಹರೀಶ್ ರವರನ್ನು ಸಚಿವರು ಅಭಿನಂದಿಸಿದರು. ಸಂಸ್ಥೆಯ ತರಬೇತಿದಾರರಾದ ವೀರೇಶ್ ಮತ್ತು ವಿವೇಕ್ ರವರನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಗೌತಮ್ ಶೆಟ್ಟಿ ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸಿದರು.
ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ತೋಕೂರು,ಸದಸ್ಯ ವಿನೋದ್ ಬೆಳ್ಳಾಯೂರು, ಹಳೆಯಂಗಡಿ ಗ್ರಾಮ ಪಂ.ಸದಸ್ಯ ವಸಂತ್ ಬೆರ್ನಾಡ್,ಅಬ್ದುಲ್ ರಜಾಕ್,ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಲಾಯಿ, ಮೂಡಬಿದ್ರೆ ಉದ್ಯಮಿ ವೆಂಕಟರಮಣ ಪೈ, ರಾಜು ಪುತ್ರನ್,ಶಶೀಂದ್ರ ಸಾಲ್ಯಾನ್, ನಾಗಭೂಷಣ್ ಮತ್ತಿತರರಿದ್ದರು. ಗೌತಮ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Mulki-08071601

Comments

comments

Comments are closed.

Read previous post:
Mulki-07071603
ತುಳು ಭಾಷಾಭಿಮಾನ ಉಳಿಯಬೇಕು

ಮೂಲ್ಕಿ: ತಾಯಿಯ ಸ್ಥಾನಮಾನವನ್ನು ಹೊಂದಿರುವ ತುಳು ಭಾಷೆಯ ಅಭಿಮಾನದಿಂದ ಸ್ವಾಭಿಮಾನದ ಬದುಕನ್ನು ಹೊರರಾಜ್ಯದಲ್ಲಿದ್ದವರು ಅರಿತಿದ್ದರು, ತುಳು ನಾಡಿನಲ್ಲಿರುವವರಲ್ಲಿ ಈ ಕೊರತೆ ಎದ್ದುಕಾಣುತ್ತಿದೆ, ತುಳು ಸಮ್ಮೇಳನದ ಮೂಲಕ ಭಾಷೆ, ಸಂಸ್ಕೃತಿ,...

Close