ಕೆರೆಗೆ ಟೆಂಪೊ ಪಿಕಪ್ ಬಿದ್ದು ಒರ್ವ ಮೃತ್ಯು

ಕಿನ್ನಿಗೋಳಿ: ಮುಲ್ಕಿ ಸಮೀಪದ ಕೆಂಚನಕೆರೆ ರಸ್ತೆ ಬದಿಯ ಕೆರೆಗೆ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ಪಿಕಪ್ ವಾಹನವೊಂದು ಬಿದ್ದು ಚಾಲಕ ಮಾಲಕ ಪಕ್ಷಿಕೆರೆ ಕಾಪಿಕಾಡು ನಿವಾಸಿ ಲಕ್ಷ್ಮಣ ಪೂಜಾರಿ (50 ವರ್ಷ) ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕೆರೆಗೆ ಬಿದ್ದ ಟೆಂಪೊ ಪಿಕಪ್ ವಾಹನದಲ್ಲಿದ್ದ ಚಾಲಕ ಕೆರೆನೀರಿಯಿಂದ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಪಕ್ಷಿಕೆರೆ ಕಾಪಿಕಾಡು ಲಕ್ಷ್ಮಣ ಪೂಜಾರಿ ಟೆಂಪೊ ಪಿಕಪ್ ವಾಹನ ಹೊಂದಿದ್ದು, ಭಾನುವಾರ ರಾತ್ರಿ ಸುಮಾರು 8.30 ಕ್ಕೆ ತಮ್ಮ ಮನೆಯಿಂದ ಬಾಡಿಗೆಗೆಂದು ಹೊರಟಿದ್ದು, ಸುಮಾರು ಒಂಬತ್ತು ಗಂಟೆಗೆ ಮನೆಗೆ ಕರೆಮಾಡಿ ನಾನು ಬಾಡಿಗೆಗೆ ಹೋಗುತ್ತಿದ್ದೇನೆ ಸುಮಾರು 10.30 ಕ್ಕೆ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮನೆಗೆ ಬಾರದೆ ಇದ್ದದ್ದನ್ನು ಗಮನಿಸಿದ ಮನೆ ಮಂದಿ ಲಕ್ಷಣ ಪೂಜಾರಿ ಅವರ ಮೊಬೈಗ್‌ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿತ್ತು.
ಸೋಮವಾರ ಬೆಳಿಗ್ಗೆ ಸ್ಥಳೀಯರು ಕೆಂಚನಕೆರೆಯ ಕೆರೆ ತಡೆಗೋಡೆ ಮುರಿತ ಹಾಗೂ ವಾಹನ ಮುಳುಗಿರುವುದನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದರು. ವಾಹನದ ಸ್ಟಿಯರಿಂಗ್ ಎಂಡ್ ಮುರಿದು ವಾಹನ ಅಡ್ಡಾದಿಡ್ಡಿ ಚಲಿಸಿ ಕೆರೆಯ ತಡೆ ಗೋಡೆಗೆ ಡಿಕ್ಕಿ ಹೊಡೆದು ಸಂಪೂರ್ಣವಾಗಿ ಕೆರೆಯಲ್ಲಿ ಮುಳುಗಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಮುಲ್ಕಿ ಪೋಲಿಸರು, ಸುರತ್ಕಲ್ ಸಂಚಾರಿ ಪೋಲಿಸರು ಮತ್ತು ಮಂಗಳೂರು ಅಗ್ನಿಶಾಮಕ ದಳದ ಸಹಾಯದಿಂದ ವಾಹನವನ್ನು ಮೆಲಕ್ಕೆತ್ತಿ ಅರ್ಧಗಂಟೆ ಹುಡುಕಾಟ ನಂತರ ಲಕ್ಷ್ಮಣ ಪೂಜಾರಿ ಅವರ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸುಮಾರು 2 ಗಂಟೆ ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಹಾಗೂ ಕೆರೆಕಾಡು ಕೆಂಚನಕೆರೆ ಒಳ ರಸ್ತೆಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಸ್ಥಳಕ್ಕೆ ಡಿಸಿಪಿ ಸಂಜೀವ ಪಾಟೀಲ್, ಎ.ಸಿ.ಪಿ ಉದಯ ನಾಯಕ್, ಅಗ್ನಿಶಾಮಕ ದಳದ ತಿಪ್ಪೆಸ್ವಾಮಿ, ಸುರತ್ಕಲ್ ಸಂಚಾರಿ ವಿಭಾಗದ ಮಂಜುನಾಥ್, ಮುಲ್ಕಿ ಪೋಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಬೇಟಿ ನೀಡಿದರು.

Kerekadu Kinnigoli-11071601 Kinnigoli-11071602 Kinnigoli-11071603 Kinnigoli-11071604 Kinnigoli-11071605 Kinnigoli-11071606 Kinnigoli-11071607 Kinnigoli-11071608 Kinnigoli-11071609 Kinnigoli-110716010 Kinnigoli-110716011 Kinnigoli-110716012

Comments

comments

Comments are closed.

Read previous post:
Kinnigoli--080716014
ಕಟೀಲು ಬಲ್ಲಾಣ ಬಳಿ ಲಾರಿ ಬಸ್ಸು ಡಿಕ್ಕಿ

 ಕಿನ್ನಿಗೋಳಿ : ಕಟೀಲು ಚರ್ಚ್ ಸಮೀಪದ ಬಲ್ಲಾಣ ತಿರುವು ಬಳಿ ಶುಕ್ರವಾರ ಕಟೀಲಿನಿಂದ ಕಿನ್ನಿಗೋಳಿಗೆ ಬರುತ್ತಿದ್ದ ಖಾಸಗಿ ಬಸ್ಸು ಹಾಗೂ ಕಿನ್ನಿಗೋಳಿಯಿಂದ ಕಟೀಲಿಗೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ...

Close