ಉಚಿತ ಸಮವಸ್ತ್ರ ವಿತರಣೆ

ಕಿನ್ನಿಗೋಳಿ: ಸಾಧಿಸುವ ಛಲ ಇಚ್ಚಾ ಶಕ್ತಿ ಇದ್ದರೆ ಯಾವುದೇ ಶಿಕ್ಷಣ ಮಾಧ್ಯಮದಲ್ಲಿಯೂ ಗುರುತರ ಸಾಧನೆ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಹಾಗೂ ಶಿಕ್ಷಕ ಹರಿರಾವ್ ಬೀಳ್ಕೂಡುಗೆ ಸಮಾರಂಭದಲ್ಲಿ ಹೇಳಿದರು.
ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ಪದೋನ್ನತಿಗೊಂಡ ಶಿಕ್ಷಕ ಹರಿರಾವ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಜಿ. ಪಂ. ಸದಸ್ಯ ವಿನೋದ್ ಕುಮಾರ್, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಮಾಜಿ ಜಿ. ಪಂ. ಸದಸ್ಯೆ ಆಶಾ ಸುವರ್ಣ, ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಗ್ರಾ. ಪಂ. ಸದಸ್ಯೆ ವಾಣಿ, ಸಿಆರ್‌ಪಿ ಜಗದೀಶ ನಾವಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ರೂಪಾ, ಸಲಹೆಗಾರ ಚಂದ್ರಶೇಖರ್, ಬಾಲಕೃಷ್ಣ ಡಿ. ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಹಶಿಕ್ಷಕರಾದ ಅನುರಾಧ ಸಿ.ಎನ್.,ಯಶೋಧಾ, ಸುಷ್ಮಾ, ಸಂತೋಷ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12071601

Comments

comments

Comments are closed.