ಛಾಯಗ್ರಾಹಕರು ಪ್ರಾಮಾಣಿಕವಾಗಿ ದುಡಿಯಬೇಕು

ಕಿನ್ನಿಗೋಳಿ: ಛಾಯಗ್ರಾಹಕರು ಸಂಘಟನಾ ಶಕ್ತಿಯೊಂದಿಗೆ ಪ್ರ್ರಾಮಾಣಿಕವಾಗಿ ದುಡಿದು ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್‌ನ ಮುಲ್ಕಿ ವಲಯದ ಮಹಾ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ ವಲಯದ ಅಧ್ಯಕ್ಷ ರಫಾಯಲ್ ರೆಬೆಲ್ಲೋ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್‌ನ ಸಲಹಾ ಸಮಿತಿ ಅಧ್ಯಕ್ಷ ವಿಠಲ್ ಚೌಟ, ಪ್ರಧಾನ ಕಾರ್ಯದರ್ಶಿ ಮದು ಮಂಗಳೂರು, ಕೋಶಾಧಿಕಾರಿ ದಯಾನಂದ ಬಂಟ್ವಾಳ, ಮೂಲ್ಕಿ ವಲಯದ ಸ್ಥಾಪಕ ಅಧ್ಯಕ್ಷ ಸೇಸಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಮುಲ್ಕಿ ವಲಯ ಅಧ್ಯಕ್ಷ ರಫಾಯಲ್ ರೆಬೆಲ್ಲೋ ಸ್ವಾಗತಿಸಿದರು. ಕಾರ್ಯದರ್ಶಿ ಅರುಣ್ ಉಲ್ಲಂಜೆ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-12071604

Comments

comments

Comments are closed.

Read previous post:
Kinnigoli-12071603
ರೋಟರಿ ವನಮಹೋತ್ಸವ

ಕಿನ್ನಿಗೋಳಿ: ಕರ್ನಾಟಕ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಮೂಡಬಿದಿರೆ ವಲಯ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಕೋಟಿ ವಕ್ಷ ಅಭಿಯಾನದಡಿಯಲ್ಲಿ ಶನಿವಾರ ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ರೋಟರಿ ಆಂಗ್ಲ...

Close