ಆದಾಯ ಘೋಷಣೆ ಯೋಜನೆ2016

ಮೂಲ್ಕಿ: ಆದಾಯ ಘೋಷಣೆ ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ಆದಾಯ ವಿವರಗಳನ್ನು ಘೋಷಿಸಿದಲ್ಲಿ ಕಡಿಮೆ ಪೆನಾಲ್ಟಿ ಸಹಿತ ಕರ ಪಾವತಿಸಿ ಸಕ್ರಮಗೊಳಿಸಲು ಸಾಧ್ಯವಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಆರ್.ಎನ್ ಸಿದ್ದಪ್ಪಾಜಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ನಡೆದ ಆದಾಯ ಘೋಷಣೆ ಯೋಜನೆ2016 ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಈ ಯೋಜನೆಯಲ್ಕಿ ಆದಾಯ ಘೋಷಣೆ ಮಾಡುವ ವ್ಯಕ್ತಿಗಳಿಗೆ 30ಶೇ ಕರ ಹಾಗೂ 7.5 ಶೇ ಪೆನಾಲ್ಟಿಯಲ್ಲಿ ಆದಾಯ ಸಕ್ರಮಗೊಳಿಸಬಹುದು. ಯೋಜನೆ ಮುಗಿದ ಬಳಿಕ ಇಲಾಖೆಯು ಶೇ300 ಕರ ವಿಧಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಆದಾಯ ಕರ ಇಲಾಖೆಯ ಮಂಗಳೂರು ವಿಭಾಗ ಆಯುಕ್ತರಾದ ಜೋಸೆಫ್ ರೋಡ್ರಿಗಸ್, ಅಧಿಕಾರಿಗಳಾದ ರಾಮ ನಾಯ್ಕ್, ಸುಧಾಕರನ್, ಜಯಂತ ಗಟ್ಟಿ ಮತ್ತು ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು. ಪಿ.ಎ.ಪ್ರಸನ್ನ ಶೆಣೈ ವಂದಿಸಿದರು.

Mulki-12071601

Comments

comments

Comments are closed.

Read previous post:
Kinnigoli-11071603
ಕೆರೆಗೆ ಟೆಂಪೊ ಪಿಕಪ್ ಬಿದ್ದು ಒರ್ವ ಮೃತ್ಯು

ಕಿನ್ನಿಗೋಳಿ: ಮುಲ್ಕಿ ಸಮೀಪದ ಕೆಂಚನಕೆರೆ ರಸ್ತೆ ಬದಿಯ ಕೆರೆಗೆ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ಪಿಕಪ್ ವಾಹನವೊಂದು ಬಿದ್ದು ಚಾಲಕ ಮಾಲಕ ಪಕ್ಷಿಕೆರೆ ಕಾಪಿಕಾಡು ನಿವಾಸಿ ಲಕ್ಷ್ಮಣ ಪೂಜಾರಿ...

Close