ತುಳು ಸಂಸ್ಕೃತಿ, ಸಂಪ್ರದಾಯದ ಅರಿವು

ಕಿನ್ನಿಗೋಳಿ: ತುಳು ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮದ ಆಯೋಜನೆ ಅಗತ್ಯ. ಇದರ ಅರಿವು ಯುವ ಸಮುದಾಯಕ್ಕೆ ಆಗಬೇಕು.ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದರು
ಕಿನ್ನಿಗೋಳಿ ಶ್ರೀ ಕಾಳಿಕಾಂಬ ಮಹಿಳಾ ವೃಂದದ ವತಿಯಿಂದ ಸರಪ್ ಅಣ್ಣಯ್ಯಾಚಾರ್ಯ ಸಭಾಭವನ ರಾಜರತ್ನಪುರ ಕಿನ್ನಿಗೋಳಿಯಲ್ಲಿ ಶನಿವಾರ ನಡೆದ ಆಟಿ ಆಚರಣೆಯಲ್ಲಿ ಚೆನ್ನೆಮಣೆ ಆಟ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಮಾತನಾಡಿದರು
ಲಲಿತಾ ಬಾಬುರಾಯ ಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಹಿಳಾ ವೃಂದದ ಮಾಜಿ ಅಧ್ಯಕ್ಶೆ ಹೇಮಾ ವಿಶ್ವನಾಥ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಶೃಇ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಯೋಗೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ, ಕೆ.ಬಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಅನಿತಾ ವಿಶ್ವನಾಥ ಆಚಾರ್ಯ ಸ್ವಾಗತಿಸಿ, ರಾಜೇಶ್ವರೀ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-12071602

Comments

comments

Comments are closed.

Read previous post:
Kinnigoli-12071601
ಉಚಿತ ಸಮವಸ್ತ್ರ ವಿತರಣೆ

ಕಿನ್ನಿಗೋಳಿ: ಸಾಧಿಸುವ ಛಲ ಇಚ್ಚಾ ಶಕ್ತಿ ಇದ್ದರೆ ಯಾವುದೇ ಶಿಕ್ಷಣ ಮಾಧ್ಯಮದಲ್ಲಿಯೂ ಗುರುತರ ಸಾಧನೆ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು. ಕಿನ್ನಿಗೋಳಿ ಸಮೀಪದ...

Close