ಮೇಜರ್ ಬಾಲಕೃಷ್ಣನ್ ರವರ ಶೃದ್ದಾಂಜಲಿ ಸಭೆ

ಮೂಲ್ಕಿ: ಸಮಯಪ್ರಜ್ಞೆ ಹಾಗೂ ಶಿಸ್ತಿನ ಜೀವನಕ್ರಮಕ್ಕೆ ಜೀವಂತ ಮಾದರಿಯಾಗಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಬುನಾದಿ ನಿರ್ಮಿಸಿದ ಮಹಾನ್ ವ್ಯಕ್ತಿ ಪ್ರೊ.ಮೇಜರ್ ವಿ.ಬಾಲಕೃಷ್ಣನ್ ರವರು ಎಂದು ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಗುರುವಾರ ಜುಲೈ 5ರಂದು ಚೆನೈಯ ತಿರುವನ್ನೂರಿನ ಸ್ವಗೃಹದಲ್ಲಿ ನಿಧನರಾದ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ. ಮೇಜರ್ ಬಾಲಕೃಷ್ಣನ್ ರವರ ಶೃದ್ದಾಂಜಲಿ ಸಭೆಯಲ್ಲಿ ಅವರು ಮಾಹಿತಿ ನುಡಿ ನಮನ ಸಲ್ಲಿಸಿದರು.
ಭಾರತೀಯ ಸೇನೆಯಲ್ಲಿ ಮೇಜರ್ ಪದವಿಯ ಬಳಿಕ ಶೈಕ್ಷಣಿಕ ರಂಗಕ್ಕೆ ಆಗಮಿಸಿ ಸೇನೆಯ ಶಿಸ್ತು ಹಾಗೂ ನಾಯಕತ್ವದ ಗುಣಗಳಿಂದ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದರು. ಅವರ ಶಿಸ್ತು ಹಾಗೂ ನೇರ ನಡೆ ನುಡಿಗಳಿಂದ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರಾಗಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗಾಗಿ ವಿದ್ಯಾರ್ಥಿಗಳಿಗೆ ಫೋಟೋಗ್ರಾಫಿ ಮತ್ತು ಪ್ರಿಂಟ್ ಡಾಕ್ ಸಹಿತ ವಿವಿಧ ಕೋರ್ಸುಗಳನ್ನು ಪರಿಚಯಿಸಿ ವಿದ್ಯಾರ್ಥಿಗಳ ಸವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು ಇವರ ಕಾಲದಲ್ಲಿ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿತವಾದ ಹಳೆ ವಿದ್ಯಾರ್ಥಿ ಸಂಘವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಖೆಗಳನ್ನು ಹೆಚ್ಚಿಸಿಕೊಂಡು ಕಾಲೇಜಿನ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾದ್ಯಾಪಕ ಡಾ. ಜಗದೀಶ ರವರು ನುಡಿನಮನ ಸಲ್ಲಿಸಿ, ಬದುಕುವುದು ಮುಖ್ಯವಲ್ಲ ಹೇಗೆ ಬದುಕಿದ್ದೇವೆ ಎಂಬುವುದಕ್ಕೆ ಪ್ರಾಮುಖ್ಯತೆ ಲಭಿಸುತ್ತದೆ. 1977 ರಿಂದ 1995 ರ ವರೆಗೆ ಮೂಲ್ಕಿ ವಿಜಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ
ಅರ್ಪಣಾ ಬಯಲು ರಂಗ ಮಂದಿರ, ಯೂತ್ ಸೆಂಟರ್, ವರ್ಕ್ ಶಾಪ್ ಬಿಲ್ಡಿಂಗ್, ಪ್ರಿಂಟಿಂಗ್ ಪ್ರೆಸ್ ,ಡೋಪ್‌ಟೆಕ್, ಪ್ರಾಧ್ಯಾಪಕರ ವಸತಿಗೃಹ ಮಾಧವ ಕೃಪಾ, ವಿದ್ಯಾರ್ಥಿನಿ ನಿಲಯದ ವಿಸ್ತರಣೆ, ಮುಂತಾದ ಮೂಲಭೂತ ಸೌಕರ್ಯಗಳ ಸ್ಥಾಪನೆ ಇವರ ಸೇವೆ ಹಾಗೂ ದೂರದರ್ಶಿತ್ವದ ಪ್ರತೀಕವಾಗಿದೆ.ಎಂದರು.
ಈ ಸಂದರ್ಭ ಮಾಜಿ ಪ್ರಾಂಶುಪಾಲ ರಾಘವ ಭಟ್, ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ,ಸಿಂಡಿಕೇಟ್ ಬ್ಯಾಂಕ್ ಪ್ರಭಂದಕ ಅಶೋಕ್ ಕುಮಾರ್ ಶೆಟ್ಟಿ , ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ಪ್ರೊ.ಬಾಲಕೃಷ್ಣನ್ ರವರ ಬಗ್ಗೆ ನುಡಿ ನಮನ ಸಲ್ಲಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಆಳ್ವಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಪ್ರಾಂಶುಪಾಲ ಪ್ರೊ.ನಾರಾಯಣ ಪೂಜಾರಿ ನಿರೂಪಿಸಿ ವಂದಿಸಿದರು.

Mulki-13071601

Comments

comments

Comments are closed.

Read previous post:
Kinnigoli-12071608
ಜುಲಾಯಿ 13: ಕಟೀಲು ಇಂದು ಸಿಯಾಳಾಭಿಷೇಕ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧ ಪಟ್ಟ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ಕಟೀಲು ದುರ್ಗೆಗೆ ವರ್ಷಂಪ್ರತಿಯಂತೆ ಜುಲಾಯಿ 13 ಬುಧವಾರ ಸೀಯಾಳಾಭಿಷೇಕ ನಡೆಯಲಿದೆ. ಬೆಳಿಗ್ಗೆ ಮಲ್ಲಿಗೆಯಂಗಡಿ ರಸ್ತೆಯ...

Close