ಕಿನ್ನಿಗೋಳಿ ಆದಾಯ ತೆರಿಗೆ ಇಲಾಖೆ ಮಾಹಿತಿ

ಕಿನ್ನಿಗೋಳಿ: ಭಾರತೀಯ ತೆರಿಗೆ ವ್ಯವಸ್ಥೆಯು ಕಳೆದ ದಶಕವೊಂದರಲ್ಲಿಯೇ ಹಲವು ಬದಲಾವಣೆಗಳಿಗೆ ಒಳಪಟ್ಟಿದ್ದು ಇದರ ಪರಿಣಾಮವಾಗಿ ಪಾವತಿ ಹಾಗು ಕಾನೂನು ಪಾಲನೆಯಲ್ಲೂ ಸುಧಾರಣೆ ಕಂಡಿದೆ. ಕಾಲಕಾಲಕ್ಕೆ ಬದಲಾಗುವ ಸರ್ಕಾರದ ನೀತಿ, ನಿಯಮಗಳ ಮಾಹಿತಿ ಮಂಥನಕ್ಕೆ ಇಂತಹ ಕಾರ್ಯಾಗಾರಗಳು ಅಗತ್ಯವಾಗಿದೆ. ಸಾರ್ವಜನಿಕರು ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳೂರು ಅಡಿಷನಲ್ ಕಮಿಷನರ್ ಸಿದ್ದಾಪ್ಪಾಜಿ ಹೇಳಿದರು.
ಆದಾಯ ತೆರಿಗೆ ಇಲಾಖೆ, ಕಿನ್ನಿಗೋಳಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಯುಗಪುರುಷದ ಜಂಟೀ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ನಡೆದ ಆದಾಯ ತೆರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆದಾಯ ತೆರಿಗೆ ಅಧಿಕಾರಿಗಳಾದ ಜೋಸೆಫ್ ರೊಡ್ರಿಗಸ್, ಮನೋಜ್‌ಕುಮಾರ್ ಸಿಂಗ್, ಜೆ.ಸಿ. ಡೆರಿಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ ಸ್ವಾಗತಿಸಿದರು. ಜೊಸ್ಸಿ ಎಡ್ವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Kinnigoli-14071604

Comments

comments

Comments are closed.

Read previous post:
Kinnigoli-14071603
ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ

ಕಿನ್ನಿಗೋಳಿ: ಕೆಮ್ರಾಲ್, ಅತ್ತೂರು, ಸುರಗಿರಿ ಯುವಕ ಮಂಡಲಿ ಇದರ ಸಹಭಾಗಿತ್ವದಲ್ಲಿ ಕೆಮ್ರಾಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಈ ಸಂದರ್ಭ ಕೆಮ್ರಾಲ್...

Close