ಕಟೀಲು ಸೀಯಾಳಾಭಿಷೇಕ

ಕಿನ್ನಿಗೋಳಿ : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭೀಕ್ಷೆಗಾಗಿ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವಂತೆ, ಬುಧವಾರ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನದ ಸೀಯಾಳಾಭಿಷೇಕ ನಡೆಯಿತು. ಬೆಳಿಗ್ಗೆ ಮಲ್ಲಿಗೆ ಅಂಗಡಿ ಸಮೀಪದ ಹೂ ಹಾಕುವ ಕಲ್ಲು ಬಳಿಯಿಂದ ಕಟೀಲು ಶ್ರೀ ದೇವಿಯ ಸನ್ನಿಧಿಗೆ ಮೆರವಣಿಗೆ ಸಾಗಿ ನಂತರ ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ ನಡೆಯಿತು ಈ ಸಂದರ್ಭ ಅತ್ತೂರು ಕೊಡೆತ್ತೂರು ಮಾಗಣೆಯ ನೂರಾರು ಭಕ್ತರು ಪಾಲ್ಗೊಂಡರು.

Kinnigoli-14071602

Comments

comments

Comments are closed.

Read previous post:
Kinnigoli-14071601
ಶ್ರದ್ಧೆ ನಿಷ್ಠೆಯಿಂದ ಅಭಿವೃದ್ಧಿ ಸಾಧ್ಯ

ಕಿನ್ನಿಗೋಳಿ: ವಿದ್ಯಾರ್ಥಿಗಳು ಪಾಠ್ಯ ಪಾಠ್ಯೇತರ ಚಟುವಟಿಕೆಗಳಲ್ಲಿ ಶ್ರದ್ಧೆ ನಿಷ್ಠೆಯಿಂದ ಭಾಗವಹಿಸಿದಾಗ ಮಾನಸಿಕ ಹಾಗೂ ಬೌದ್ಧಿಕವಾಗಿ ಅಭಿವೃದ್ಧಿ ಹೊಂದಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬಲ್ಲನು ಎಂದು ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ...

Close