ಶ್ರದ್ಧೆ ನಿಷ್ಠೆಯಿಂದ ಅಭಿವೃದ್ಧಿ ಸಾಧ್ಯ

ಕಿನ್ನಿಗೋಳಿ: ವಿದ್ಯಾರ್ಥಿಗಳು ಪಾಠ್ಯ ಪಾಠ್ಯೇತರ ಚಟುವಟಿಕೆಗಳಲ್ಲಿ ಶ್ರದ್ಧೆ ನಿಷ್ಠೆಯಿಂದ ಭಾಗವಹಿಸಿದಾಗ ಮಾನಸಿಕ ಹಾಗೂ ಬೌದ್ಧಿಕವಾಗಿ ಅಭಿವೃದ್ಧಿ ಹೊಂದಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬಲ್ಲನು ಎಂದು ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಕನ್ನಡ ಉಪನ್ಯಾಸಕ ಶ್ರೀಧರ ಡಿ. ಎಸ್ ಹೇಳಿದರು.
ಸೋಮವಾರ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ 2016-17 ನೇ ಸಾಲಿನ ವಿವಿಧ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಪೊಂಪೈ ಕಾಲೇಜು ಸಂಚಾಲಕ ಫಾ. ವಿಕ್ಟರ್ ಡಿಮೊಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಪ್ರಿನ್ಸಿಪಾಲ್ ಮಾಥ್ಯೂ ಎಮ್. ಎನ್ ಶುಭ ಹಾರೈಸಿದರು.
ಕ್ಲಬ್‌ಗಳ ಸಮನ್ವಯಕಾರ ಎಚ್. ಎಸ್. ಗೋಪಾಲ್, ಲಾರೆನ್ಸ್ ಸಿಕ್ವೇರ, ಜಾಯ್ವಿನ್ ಡಿಸೋಜ, ಆಲ್ವಿನ್ ಮಿರಾಂದ, ವಿನಿತ ಮರಿಯಾ ಡಿಸೋಜ ಉಪಸ್ಥಿತರಿದ್ದರು. ಅನಂತ ಮೂಡಿತ್ತಾಯ ಕ್ಲಬ್ ಚಟುವಟಿಕೆಗಳನ್ನು ಪರಿಚಯಿಸಿದರು. ಪ್ರೀತಿ ವೀರಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14071601

Comments

comments

Comments are closed.

Read previous post:
Mulki-14071602
ಎನ್.ಎಸ್. ಬಾಳಿಗ

ಮೂಲ್ಕಿ: ಮೂಲ್ಕಿ ವೆಂಕಟರಮಣ ದೇವಸ್ಥಾನ ನಿವಾಸಿ ಎನ್.ಎಸ್. ಬಾಳಿಗ(84) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಬಳಿಕ...

Close