ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮೂಲ್ಕಿ: ಬಹು ಅಮೂಲ್ಯವಾದ ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳು ಜಾತಿ ವ್ಯವಸ್ಥೆಯ ವೈಭವೀಕರಣದ ಮೂಲಕ ಕುಲಗೆಟ್ಟುಹೋಗುತ್ತಿದ್ದು ಜಾತಿ ಆಧಾರಿತ ಮೀಸಲಾತಿಯು ಮೂಲ ಉದ್ದೇಶವನ್ನು ಪೂರೈಸದೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಹಾಳು ಮಾಡ ಹೊರಟಿರುವುದು ವಿಪರ್ಯಾಸಎಂದು ಆಳ್ವಾಸ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾರವರು ಹೇಳಿದರು.
ಶುಕ್ರವಾರ ರಾತ್ರಿ ಮೂಲ್ಕಿ ಕಾರ್ನಾಡು ಸೈಂಟ್ ಜೋಸೆಫ್ ಹಾಲ್‌ನಲ್ಲಿ ನಡೆದ ಮೂಲ್ಕಿ ರೋಟರೀಕ್ಲಬ್ 2016-17ನೇ ಸಾಲಿನ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ ನತ್ತು ತಂಡದ ಪದಗ್ರಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಕೌಟುಂಬಿಕ ಬದುಕಿಗೆ ಪೂರಕವಾಗಿದ್ದ ಜಾತಿ ವ್ಯವಸ್ಥೆಯು ವೈಭವೀಕರಣದ ಪರಿಣಾಮ ಸಮಾಜ ಎಂದು ಹೇಳಲ್ಪಡುತ್ತಿದ್ದು ಜೀವನದ ಅಗತ್ಯಕ್ಕೆ ಪೂರಕವಾದ ಮತಗಳು ಇದು ಧರ್ಮವೆಂದು ಹೇಳಿಸಿಕೊಳ್ಳುವ ಪರಿಣಾಮ ವಿಶ್ವದಲ್ಲಿಯೇ ಏಕೈಕ ಮಾನವ ಧರ್ಮವು ತನ್ನು ಸದೃಡ ಬುನಾದಿಯಿಂದ ಕಳಚಿಕೊಳ್ಳುವ ಸ್ಥಿತಿಗೆ ತಲುಪಿದೆ ಎಂದರು.
ಇಂದು ಸಮಾಜ ಸೇವೆಯ ಹೆಸರಿನಲ್ಲಿ ವಂಚಿಸುವ ಅದೆಷ್ಟೋ ಸಂಸ್ಥೆಗಳ ನಡುವೆ ರೋಟರಿ ಮುಂತಾದ ಸ್ವಾರ್ಥ ರಹಿತ ಸೇವೆ ನೀಡಿ ಮಾನವಧರ್ಮದ ಉತ್ತಾನಕ್ಕೆ ಪ್ರಯತ್ನಿಸುವ ಈ ಸಂಸ್ಥೆಗಳು ತಾಯಿಗಿಂತಲೂ ಮಿಗಿಲಾಗಿವೆ. ಯುವ ಸಮಾಜ ಈ ಆದರ್ಶವನ್ನು ಮೈಗೋಡಿಸಿಕೊಳ್ಳಬೇಕು ಅರ್ಹರಿಗೆ ಸಹಾಯ ಮಾಡುವಾಗ ಜಾತಿ ಮತಗಳು ಅಡ್ಡಿ ಬರಬಾರದು. ವಿದ್ಯಾರ್ಥಿಗಳಿಗೆ ಈ ದಿನಗಳು ಬಹಳ ಸ್ಪರ್ದಾತ್ಮಕವಾಗಿದ್ದು ಸಮಯ ಪರಿಪಾಲನೆ ಶೃದ್ದೆಯಿಂದ ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು.ಭಾರತ ದೇಶದಲ್ಲಿ ಹುಟ್ಟಿದ ನಾವು ವಿಶ್ವ ಎಲ್ಲಿದ್ದರೂ ಭಾರತೀಯರಾಗಿ ಬದುಕಬೇಕು ಎಂದರು.
ಈ ಸಂದರ್ಭ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ, ಪೂರ್ವಾಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಟಿ.ಗೋಪಾಲ ಭಂಡಾರಿ, ಕೋಶಾಧಿಕಾರಿ ಜೋಯಲ್ ಹೆರಾಲ್ಡ್ ಡಿಸೋಜಾ, ಸಾರ್ಜೆಂಟ್ ಆಟ್ ಆರ್ಮ್ಸ್ ಅಬ್ದುಲ್ ರೆಹೆಮಾನ್, ನಿರ್ದೇಶಕರಾಗಿ ಎನ್.ಪಿ.ಶೆಟ್ಟಿ, ಬಾಲಚಂದ್ರ ಸನಿಲ್.ಅಶೋಕ್ ಕುಮಾರ್ ಶೆಟ್ಟಿ, ವೈ.ಎನ್.ಸಾಲ್ಯಾನ್,ಜೋನ್ ಜೂಲಿಯಸ್ ಡಿಸೋಜಾ, ವಿಷ್ಣು ಮೂರ್ತಿ, ಹೇಮಂತ್ ಕುಮಾರ್, ಎಂ.ನಾರಾಯಣ ರವರಿಗೆ ಪದಗ್ರಹಣಾಧಿಕಾರಿ ರೋಟರಿ ಜಿಲ್ಲೆಯ ಸದಸ್ಯತ್ವ ಅಭಿವೃದ್ಧಿ ಮತ್ತು ವಿಸ್ತರಣೆ ವಿಭಾಗದ ಮುಖ್ಯಸ್ಥ ಬಿ.ಶೇಕರ್ ಶೆಟ್ಟಿಯವರು ಪ್ರತಿಜ್ಞಾವಿಧಿ ಭೋಧಿಸಿದರು.
ಕನ್ನಡ ಭಾಷೆಯಲ್ಲಿ ಪ್ರತಿಭಾನ್ವಿತರಾಗಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುವ ದಿ.ರಾಮಚಂದ್ರ ಭಟ್ ದತ್ತಿ ಪ್ರಶಸ್ತಿಯನ್ನು ಎಸ್.ಎಸ್.ಎಲ್.ಸಿ ಕನ್ನಡ ಪರೀಕ್ಷೆಯಲ್ಲಿ 125ರಲ್ಲಿ 124 ಗಳಿಸಿದ ಮೆಡಲಿನ್ ಹೈಸ್ಕೂಲು ವಿದ್ಯಾರ್ಥಿ ಲಾವಣ್ಯ.ಆರ್.ದೇವಾಡಿಗಾ ಮತ್ತು 125/123 ಅಂಕ ಗಳಿಸಿದ ಮೂಲ್ಕಿ ಸರಕಾರಿ ಪ್ರೌಢಶಾಲೆಯ ಕಿರಣ್ ಕುಮಾರ್ ಪಡೆದುಕೊಂಡರು.
ಮೂಲ್ಕಿ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಎಸ್.ಎಸ್.ಎಲ್.ಸಿ ಕನ್ನಡ ಮಾದ್ಯಮದ ಪ್ರತಿಭಾನ್ವಿತರಾದ ಅನಿತಾ,ಶ್ರೀಕೃಷ್ಣ,ಕಿರಣ್ ಕುಮಾರ್,ಅಕ್ಷಯ್,ಖತೀಜಾ, ಭಾಗ್ಯಶ್ರೀ, ಸುಷ್ಮಿತಾ ಜಾಸ್ಮಿನ್ ಡಿಸೋಜಾ .ಆಂಗ್ಲ ಮಾದ್ಯಮದ ಪ್ರದೀಪ್ತಾ ಆರ್.ಜೈನ್, ಶ್ರಾವ್ಯ, ವಿಪ್ತಾ. ವಿ.ಸನಿಲ್, ಕ್ರಿಷ್ಣಿತಾ, ಮಾಶಿತಾ. ಸಿಬಿಎಸ್‌ಸಿ ಪ್ರತಿಭಾನ್ವಿತರಾದ ಸಮರ್ಥ ಪ್ರಭು, ಜೆ.ನರಹರಿ ರಾವ್, ಅಮಿಶಾ ಶೆಟ್ಟಿ, ರಿಶಿಕಾ ಪಡೆದುಕೊಂಡರು.
ಪಿಯುಸಿ ವಿಜ್ಞಾನ ವಿಭಾಗದ ಎಚ್.ಪ್ರಯಾಂಕ ಬಾಲಕೃಷ್ಣ, ಕೇರೆಲ್ ಪರ್ಲ್ ಡಿಸೋಜಾ, ಯಶ್‌ರಾಜ್. ವಾಣಿಜ್ಯ ವಿಭಾಗದ ಕೆ.ಪ್ರೀತಿ ಉಪಾದ್ಯಾಯ, ರೋವಿನಾ ಶಾರೊನ್ ಡಿಸೋಜಾ, ಆಯೇಶಾ ಹಾಪ್ತಾ, ಫಝಿಲಾ ಶೇಕ್,  ದೀಕ್ಷಾ.ಎಲ್. ಕಲಾ ವಿಭಾಗದಲ್ಲಿ ತಸ್ಮಿಯಾ, ಚಿತ್ರಾ ಪಿ ಗಳಿಸಿದರು. ರೋಟರಿ ಜಿಲ್ಲಾ ಉಪರಾಜ್ಯಪಾಲ ಜೆ.ಸಿ.ಸಾಲ್ಯಾನ್ ಮೂಲ್ಕಿ ರೋಟರಿ ಗ್ರಹಪತ್ರಿಕೆ ಮೂಲಿಕಾ ಬಿಡುಗಡೆಗೊಳಿಸಿದರು. ಝೋನಲ್ ಲೆಪ್ಟಿನೆಂಟ್ ಪ್ರೊ.ಜಯರಾಮ ಪೂಂಜ ಶುಭಾಶಂಸನೆ ಗೈದರು.2015-16 ಸಾಲಿನ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ,ಕಾರ್ಯದರ್ಶಿ ಟಿ.ಗೋಪಾಲ ಭಂಡಾರಿ ಉಪಸ್ಥಿತರಿದ್ದರು. ರವಿಚಂದ್ರ ಸ್ವಾಗತಿಸಿದರು. ವೈ.ಎನ್.ಸಾಲ್ಯಾನ್ ಮತ್ತು ವಿಷ್ಣುಮೂರ್ತಿ ನಿರೂಪಿಸಿದರು. ಗೋಪಾಲ ಭಂಡಾರಿ ವಂದಿಸಿದರು.

Mulki-13071603

Comments

comments

Comments are closed.

Read previous post:
Kinnigoli-14071605
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ: ಸನ್ಮಾನ

ಕಿನ್ನಿಗೋಳಿ: ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ವತಿಯಿಂದ ನೂತನವಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹಿರಿಯ ವಕೀಲೆ ಗೌರಿ,...

Close