ಜುಲೈ 24 : ವೇದವಿದ್ವಾಂಸರ ಸನ್ಮಾನ

ಕಿನ್ನಿಗೋಳಿ: ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರಿಗೆ ವೇದವಿದ್ವಾಂಸರ ನೆಲೆಯಲ್ಲಿ ಸನ್ಮಾನ ಉಡುಪಿ ಸಂಸ್ಕೃತ ಮಹಾ ಪಾಠ ಶಾಲೆಯಲ್ಲಿ ವೇದಾಂತ ಪ್ರಾಧ್ಯಾಪಕರಾಗಿ ೨೮ ವರ್ಷ ಸೇವೆ ಸಲ್ಲಿಸಿ ಇದೀಗ ಶಿಬರೂರು ಮಠದ ತಂತ್ರಿ ಮನೆತನಕ್ಕೆ ಪರಂಪರಾಗತವಾಗಿ ಬಂದಿರುವ ಶ್ರೀ ಕಟೀಲು, ಶಿಮಂತೂರು, ಏಳಿಂಜೆ, ಸುರಿಗಿರಿ ಹಾಗೂ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳಲ್ಲಿ ತಾಂತ್ರಿಕ ಕರ್ತವ್ಯವನ್ನು ನಿರ್ವಹಿಸುತ್ತಾ ಬರುತ್ತಿರುವ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಅವರನ್ನು ಜುಲೈ 24 ಭಾನುವಾರ ಜರಗಲಿರುವ ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ ಸಂಸ್ಮರಣ ಸಮಾರಂಭದ ಸಂದರ್ಭ ದಿ. ಕಮಲಾಕ್ಷಿ ಉಡುಪರ ಸ್ಮರಣಾರ್ಥ ವೇದವಿದ್ವಾಂಸರ ನೆಲೆಯಲ್ಲಿ ಸನ್ಮಾನಿಸಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

Kinnigoli-16071603

Comments

comments

Comments are closed.

Read previous post:
Kinnigoli-16071602
ಪ್ರಾಮಾಣಿಕ ಶಿಸ್ತು ಬದ್ದ ಜೀವನ ರೂಡಿಸಬೇಕು

ಕಿನ್ನಿಗೋಳಿ: ಪ್ರಾಮಾಣಿಕ ಶಿಸ್ತು ಬದ್ದ ಜೀವನ ರೂಡಿಸಿಕೊಂಡು ಸಂಘಟನಾ ಶಕ್ತಿಯೊಂದಿಗೆ ಅರ್ಹರಿಗೆ ಸಹಾಯ ಹಸ್ತನೀಡಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬಾಳಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭೀರಾಮ...

Close