ಪ್ರಾಮಾಣಿಕ ಶಿಸ್ತು ಬದ್ದ ಜೀವನ ರೂಡಿಸಬೇಕು

ಕಿನ್ನಿಗೋಳಿ: ಪ್ರಾಮಾಣಿಕ ಶಿಸ್ತು ಬದ್ದ ಜೀವನ ರೂಡಿಸಿಕೊಂಡು ಸಂಘಟನಾ ಶಕ್ತಿಯೊಂದಿಗೆ ಅರ್ಹರಿಗೆ ಸಹಾಯ ಹಸ್ತನೀಡಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬಾಳಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭೀರಾಮ ಉಡುಪ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲ್ಲಿ ಶನಿವಾರ ನಡೆದ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಆಕಸ್ಮಿಕವಾಗಿ ಮೃತಪಟ್ಟ ಸಂಘದ ಸದಸ್ಯ ಸದಾನಂದ ಸುವರ್ಣರ ಪತ್ನಿ ಲತಾ ಅವರಿಗೆ ಧನಸಹಾಯ ನೀಡಲಾಯಿತು.
ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ ಪೂಜಾರಿ, ಜೇಮ್ಸ್ ಮಾರ್ಟಿಸ್, ಶ್ರೀನಿವಾಸ್ ಎಸ್‌ಕೋಡಿ, ಸತೀಶ್ ಕಲ್ಲಮುಂಡ್ಕೂರು, ಉದಯಕುಮಾರ್ ಏಳಿಂಜೆ, ರಾಜೇಶ್ ಕಿಲೆಂಜೂರು, ಜಯರಮ, ಹರೀಶ್ ಶಿಮಂತೂರು, ಹರಿಣಾಕ್ಷ ಪುನರೂರು, ಬಾಲಕೃಷ್ಣ, ಗೋಪಾಲ ಬಂಗೇರ, ಹರೀಶ್ ಕೊಲ, ನಾಗರಾಜ ಉಪಸ್ಥಿತರಿದ್ದರು. ಕೋಶಾಧಿಕಾರಿ ವಸಂತ ಶೆಟ್ಟಿಗಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಶಶಿಕಾಂತ್ ರಾವ್ ಸ್ವಾಗತಿಸಿ, ವಾರ್ಷಿಕ ವರದಿ ನೀಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-16071602

Comments

comments

Comments are closed.

Read previous post:
Mulki-16071601
ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ 12 ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಪ್ರಾರ್ಥನೆ ಸಲ್ಲಿಸಿ...

Close