ಮಹಿಳೆಯರು ಶಿಕ್ಷಿತರಾದಾಗ ಸಮಾಜ ಅಭಿವೃದ್ದಿ

ಕಿನ್ನಿಗೋಳಿ: ತಾಯಿಯೇ ಮೊದಲ ಪಾಠ ಶಾಲೆ ಎಂಬಂತೆ ಮಹಿಳೆಯರು ಶಿಕ್ಷಿತರಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಸಾಮಾಜಿಕ ಸಂಬಂಧಗಳು ಹೆಚ್ಚಾಗಿ ಎಲ್ಲಾ ರೀತಿಯಲ್ಲಿಯೂ ಸಮಾಜ ಅಭಿವೃದ್ದಿ ಹೊಂದುತ್ತದೆ. ಎಂದು ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ನಿವೇದಿತಾ ಸಿ. ಲೋಬೊ ಹೇಳಿದರು.

ಭಾನುವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ನಡೆದ ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ನ 2016-17 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷೆ ವಿಮಲ ತ್ಯಾಗರಾಜ್ ಹಾಗೂ ಕಾರ್ಯದರ್ಶಿ ಸವಿತಾ ಸಂತೋಷ್ ಅವರ ತಂಡ ಅಧಿಕಾರ ಸ್ವೀಕರಿಸಿದರು.
318 ರ ಇನ್ನರ್‌ವೀಲ್ ಜಿಲ್ಲಾ ಚೆಯರ್‌ಮನ್ ಚಿತ್ರಾ ವಿ. ರಾವ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ ಉಪಸ್ಥಿತರಿದ್ದರು.
ಇನ್ನರ್ ವೀಲ್ ನ ಮುಖವಾಣಿ ಕಾರಂಜಿಯ ಬಿಡುಗಡೆ, ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಧನ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ಪಕ್ಷಿಕೆರೆ ಹಿ.ಪ್ರಾ. ಶಾಲಾ ಮಕ್ಕಳಿಗೆ ಟೈ ಗಳನ್ನು ವಿತರಿಸಲಾಯಿತು.

ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಪ್ರೀತಿ ಎಸ್. ಶೆಟ್ಟಿ ಸ್ವಾಗತಿಸಿದರು, ಸವಿತಾ ಸಂತೋಷ್ ವಂದಿಸಿದರು, ಶಾಲೆಟ್ ಪಿಂಟೊ ಮತ್ತು ಮಲ್ಲಿಕಾ ಪೂಂಜ ಕಾರ್ಯಕ್ರಮ ನಿರೂಪಿಸಿದರು.

Kinnigoli-180716014 Kinnigoli-180716015 Kinnigoli-180716016 Kinnigoli-180716017

Comments

comments

Comments are closed.

Read previous post:
Mulkii-18071608
ಮೂಲ್ಕಿಯಲ್ಲಿ ಆಟಿಡೊಂಜಿ ದಿನ 2016 ಸಂಭ್ರಮ

ಮೂಲ್ಕಿ: ತುಳುನಾಡಿನ ಆಟಿಯ ಜೀವನ ಕ್ರಮ ಆರೋಗ್ಯದ ಹಿತ ದೃಷ್ಠಿಯಲ್ಲಿ ಮಹತ್ವಪೂರ್ಣ ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಹೇಳಿದರು. ಯುವ ವಾಹಿನಿ ಮೂಲ್ಕಿ...

Close