ಮೂಲ್ಕಿಯಲ್ಲಿ ಆಟಿಡೊಂಜಿ ದಿನ 2016 ಸಂಭ್ರಮ

ಮೂಲ್ಕಿ: ತುಳುನಾಡಿನ ಆಟಿಯ ಜೀವನ ಕ್ರಮ ಆರೋಗ್ಯದ ಹಿತ ದೃಷ್ಠಿಯಲ್ಲಿ ಮಹತ್ವಪೂರ್ಣ ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಹೇಳಿದರು. ಯುವ ವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ಭಾನುವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಆಟಿಡೊಂಜಿ ದಿನ 2016 ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಅಗತ್ಯವಾದ ಆಟಿಯ ಬಗ್ಗೆ ಸಂಪೂರ್ಣ ತಿಳುವಳಿಕೆ ನೀಡುತ್ತಾ ಬರುತ್ತಿರುವ ಯುವವಾಹಿನಿ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅತಿಥಿಯಾಗಿದ್ದ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ಮಾತನಾಡಿ, ಆಟಿ ಕೇವಲ ಅಮವಾಸ್ಯೆಗೆ ಸೀಮಿತವಾಗದೆ ತಿಂಗಳು ಪೂರ್ತಿ ಮನೆಯಲ್ಲಿ ಆಚರಿಸುವಂತಾಗಬೇಕು ಎಂದರು.
ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಚಾವಡಿಮನೆ ಜಗನ್ನಾಥ ಶೆಟ್ಟಿಯವರು ಮಾತನಾಡಿ, ಯುವ ಜನತೆ ಆಧುನಿಕ ಬದುಕಿನ ಆಕರ್ಷಣೆಯಲ್ಲಿ ಮೂಲ ಸಂಸ್ಕಾರದಿಂದ ವಿಮುಖ ರಾಗುತ್ತಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕು ಸಮಾಜದಲ್ಲಿ ಸಾಮರಸ್ಯ ಪರೋಪಕಾರಿ ಮನೋಬಾವನೆ ಮೂಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಆಟಿಯ ಮದಿಪು ನೀಡಿದ ಪತ್ರಕರ್ತ ವಾಮನ ಇಡ್ಯಾ ರವರು ಮಾತನಾಡಿ, ಆಟಿಯ ಜೀವನ ಕ್ರಮ ಕಷ್ಟದಾಯಕವಾಗಿದ್ದು ಮಳೆಯ ಕಾರಣ ಸೋಂಕುರೋಗಗಳು ಹಾಗೂ ಇನ್ನತರ ಜಾಡ್ಯಗಳು ಪೀಡಿಸುವ ಸಂದರ್ಭ ಅಧಿಕವಿರುವ ಕಾರಣ ತಮ್ಮ ಅನುಭವದಿಂದ ಕಂಡುಕೊಂಡ ಗಿಡ ಮೂಲಿಕೆಗಳನ್ನು ಆಹಾರ ಅಥವಾ ಕಶಾಯ ರೂಪದಲ್ಲಿ ಸೇವಿಸಿದಾಗ ರೋಗ ರುಜಿನಗಳಿಂದ ರಕ್ಷಣೆ ಸಾಧ್ಯ. ಆಟಿ ಆಚರಣೆ ಪಾಲನೆಯಲ್ಲಿ ಮೌಢ್ಯಗಳು ಇತ್ತೀಚಿನ ದಿನಗಳಲ್ಲಿ ತುಂಬಿಕೊಂಡಿದ್ದು ಅವುಗಳ ಬಗ್ಗೆ ಸೂಕ್ತ ತಿಳುವಳಿಕೆ ಸಹಿತವಾಗಿ ಆಚರಣೆಯಾಗಬೇಕು ಎಂದರು.
ಈ ಸಂದರ್ಭ ಆಟಿ ತಮ್ಮನ (ಸನ್ಮಾನವನ್ನು) ಚಿತ್ರ ಮತ್ತು ರಂಗ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ರವರಿಗೆ ನೀಡಲಾಯಿತು.
ದೋಲು ದುನಿತ: ಈ ವರ್ಷದ ಹೊಸ ಸೇರ್ಪಡೆಯಾಗಿ ಕೆಂಚನ ಕೆರೆ ಡೋಲು ತಂಡದ ಬಾಡು,ತೋಮ,ನೀಲಯ್ಯ ತಂಡದಿಂದ ಡೋಲು ವಾದನ ನಡೆಯಿತು. ಸಂಸ್ಥೆಯ ಪೂರ್ವಾಧ್ಯಕ್ಷ ಚಂದ್ರಶೇಖರ ಸುವರ್ಣ ನಿರೂಪಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು. ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಚೇತನ್ ಕುಮಾರ್,ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಕೋಶಾಧಿಕಾರಿ ಕುಶಲಾ ಎಸ್.ಕೋಟ್ಯಾನ್, ಕಾರ್ಯಕ್ರಮ ಸಂಯೋಜಕರಾದ ದೀಕ್ಷಾ ಸುವರ್ಣ ದಿವಾಕರ ಕೋಟ್ಯಾನ್ ಉಪಸ್ಥಿತರಿದ್ದರು.
ಚೇತನ್ ಕುಮಾರ್ ಸ್ವಾಗತಿಸಿದರು.ದೀಕ್ಷಾ ಸುವರ್ಣ ಪರಿಚಯಿಸಿದರು. ವಿಜಯಕುಮಾರ್ ಕುಬೆವೂರು ಪ್ರಸ್ತಾವಿಸಿದರು. ಸತೀಶ್ ಕುಮಾರ್ ವಂದಿಸಿದರು ಉದಯ ಅಮೀನ್ ಮಟ್ಟು ನಿರೂಪಿಸಿದರು.

Mulkii-18071602Mulkii-18071607Mulkii-18071608Mulkii-18071609Mulkii-180716010.Mulkii-18071603Mulkii-18071605Mulkii-18071604Mulkii-180716012Mulkii-180716011Mulkii-18071606Mulkii-180716013

Comments

comments

Comments are closed.

Read previous post:
Kinnigoli-18071601
ಅಂಗನವಾಡಿ ಶೌಚಾಲಯ ಉದ್ಘಾಟನೆ

ಕಿನ್ನಿಗೋಳಿ: ಭಾನುವಾರ ಪುನರೂರು ಭಾರತಮಾತಾ ಅಂಗನವಾಡಿ ಶಾಲೆಗೆ ದಾನಿಗಳ ಸಹಕಾರದಿಂದ 30,000 ರೂ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಉದ್ಘಾಟಿಸಿದರು. ಈ...

Close