ಮುಲ್ಕಿ-ಮೂಡಬಿದಿರೆ ಬಿಜೆಪಿ ಪದಗ್ರಹಣ

ಕಿನ್ನಿಗೋಳಿ: ಮುಲ್ಕಿ-ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಜಿ. ಪಂ. ತಾ. ಪಂ. ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಕಂಡಿದೆ. ಬಿಜೆಪಿಯ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.
ಭಾನುವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ನಡೆದ ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ನೂತನ ಅಧ್ಯಕ್ಷ ಈಶ್ವರ್ ಕಟೀಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವಿಕಾಸಪರ್ವದಲ್ಲಿ ಮಾತನಾಡಿ ತಳಹದಿಯ ಕಾರ್ಯಕರ್ತರ ಬೆಂಬಲ ಮತ್ತು ಹೃದಯಾಂತಳದ ಆಯ್ಕೆಯಿಂದ ಬಿಜೆಪಿಯ ಸರ್ವ ಸಾಮಾನ್ಯ ಕಾರ್ಯಕರ್ತ ಕೂಡಾ ಬಿಜೆಪಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳಾಗುತ್ತಾರೆ. ಕಾಂಗ್ರೆಸ್ ಸರಕಾರ ಮುಂದಿನ ಎರಡು ವರ್ಷದಲ್ಲಿ ಪತನಗೊಂಡು ಕ್ರಾಂಗ್ರೆಸ್ ಮುಕ್ತ ರಾಜ್ಯ ಆಗಲಿದೆ ಇದಕ್ಕೆ ಮೂಲ ಕಾರಣ ಕರ್ನಾಟಕ ಕಾಂಗ್ರೇಸಿನ ಇತ್ತೀಚಿನ ವಿವಾದಾತ್ಮಕ ನಿಲುವುಗಳು ಎಂದರು.

ಸಂಸದ ಅನಂತ ಕುಮಾರ್ ಹೆಗಡೆ ಮಾತನಾಡಿ ಸಾಮಾಜಿಕ, ರಾಜಕೀಯವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯವಾಗಿ ಅವಕಾಶ ನೀಡಬೇಕಾಗಿದೆ ಹೇಳಿದರು. ಎಂದು ಹೇಳಿದರು.
ದ,ಕ,ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮೂಲ್ಕಿ – ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಮುಲ್ಕಿ ಹಾಗೂ ಸುಕೇಶ್ ಶೆಟ್ಟಿ ಶಿರ್ತಾಡಿ ಹಾಗೂ ಪದಾಧಿಕಾರಿಗಳ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಟ್ಟರು.
ಈ ಸಂದರ್ಭ ಮುಲ್ಕಿ-ಮೂಡಬಿದ್ರೆ ಮಂಡಲದ ಮಾಜೀ ಅಧ್ಯಕ್ಷ ಸುಚರಿತ ಶೆಟ್ಟಿ, ಮೂಡಬಿದ್ರೆ ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಅವರನ್ನು ಅಭಿನಂದಿಸಲಾಯಿತು.

ಯೋಗೀಶ್ ರಾವ್ ಏಳಿಂಜೆ, ಅಬ್ದುಲ್ ರಜಾಕ್, ಜೇಮ್ಸ್ ಮಾರ್ಟಿಸ್, ಪ್ರಕಾಶ್ ಹೆಗ್ಡೆ ಎಳತ್ತೂರು, ರಾಜನ್ ಡಿಕೋಸ್ತ, ಕೃಷ್ಣ ಮಾರ್ಲ ಅವರನ್ನು ಧ್ವಜ ನೀಡಿ ಬಿಜೆಪಿ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಗೊಳಿಸಲಾಯಿತು.

ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ನಿಕ್,
ಶಾಸಕ ಕೋಟಾ ಶ್ರೀನಿವಾಸ್ ಪೂಜಾರಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ್ ಎಂ., ಜಿಲ್ಲಾ ಉಪಾಧ್ಯಕ್ಷರಾದ ಕೆ. ಪಿ. ಜಗದೀಶ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಕಿಶೋರ್ ರೈ, ಬ್ರಜೇಶ್ ಚೌಟ, ಮುಲ್ಕಿ-ಮೂಡಬಿದಿರೆ ಮಂಡಲ ನಿಕಟಪೂರ್ವ ಅಧ್ಯಕ್ಷ ಸುಚರಿತ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಉಪಸ್ಥಿತರಿದ್ದರು.

ಮುಲ್ಕಿ-ಮೂಡಬಿದ್ರೆ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ನಾಗರಾಜ ಪೂಜಾರಿ ವಿವಿಧ ಮೋರ್ಚಾ ಪದಾಧಿಕಾರಿಗಳ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ ವಂದಿಸಿದರು. ಮುಲ್ಕಿ-ಮೂಡಬಿದ್ರೆ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಮುಲ್ಕಿ, ಮುಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Kinnigoli-180716018 Kinnigoli-180716019 Kinnigoli-180716020 Kinnigoli-180716021

Comments

comments

Comments are closed.

Read previous post:
Kinnigoli-180716017
ಮಹಿಳೆಯರು ಶಿಕ್ಷಿತರಾದಾಗ ಸಮಾಜ ಅಭಿವೃದ್ದಿ

ಕಿನ್ನಿಗೋಳಿ: ತಾಯಿಯೇ ಮೊದಲ ಪಾಠ ಶಾಲೆ ಎಂಬಂತೆ ಮಹಿಳೆಯರು ಶಿಕ್ಷಿತರಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಸಾಮಾಜಿಕ ಸಂಬಂಧಗಳು ಹೆಚ್ಚಾಗಿ ಎಲ್ಲಾ ರೀತಿಯಲ್ಲಿಯೂ ಸಮಾಜ ಅಭಿವೃದ್ದಿ ಹೊಂದುತ್ತದೆ. ಎಂದು ಹಳೆಯಂಗಡಿ...

Close