ಶಿಕ್ಷಣ ಕಾಲಕ್ಕೆ ತಕ್ಕಂತೆ ನವೀಕರಣ ಆಗಬೇಕು

ಕಿನ್ನಿಗೋಳಿ: ಕಟೀಲು: ವಾಣಿಜ್ಯ ಉಪನ್ಯಾಸಕರ ಕಾರ್ಯಾಗಾರ ಜಯರಾಂ ಪೂಂಜಾ.

ಬಹು ಬೇಡಿಕೆಯ ವಾಣಿಜ್ಯ ವಿಭಾಗದಲ್ಲಿ ಕಾಲ ಕಾಲಕ್ಕೆ ಪಠ್ಯಕ್ರಮ ನವೀಕರಣಗೊಂಡು ಹೊಸ ಹೊಸ ಸವಾಲುಗಳನ್ನು ಎದುರಿಸಲು ನಿರಂತರ ಕಾರ್ಯಾಗಾರ ಅತ್ಯಗತ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜ ಹೇಳಿದರು.
ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಹಾಗೂ ಮುಕ್ತ ಸಂಘಟನೆಯ ಸಹಯೋಗದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಉಪನ್ಯಾಸಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶುಭ ಹಾರೈಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಾಣಿಜ್ಯ ವಿಭಾಗ ಶೈಕ್ಷಣಿಕವಾಗಿ ಬಹುಮುಖ್ಯ ವಿಷಯವಾಗಿದ್ದು, ಪಠ್ಯ ವಿಷಯಗಳು ನವೀಕರಣಗೊಂಡಾಗ ಮಾತ್ರ ನೈಜತೆ ಉಳಿಯುತ್ತದೆ, ಎಂದರು.
ಈ ಸಂದರ್ಭ ಜಿ.ಬಿ. ಶೆಟ್ಟಿ ಬರೆದ ಕಾಸ್ಟ್ ಆಂಡ್ ಮೆನೇಜ್‌ಮೆಂಟ್ ಅಕೌಂಟ್ಸ್ ಪಠ್ಯ ಪುಸ್ತಕವನ್ನು ಪ್ರೊ. ಬಾಲಕೃಷ್ಣ ಶೆಟ್ಟಿ ಅನಾವರಣಗೊಳಿಸಿದರು.
ಟೀಚರ್ ಕೋ. ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಪ್ರಮೋದ್ ಹೆಗ್ಡೆ ಬ್ಯಾಂಕಿನ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಗಣೇಶ್ ಭಟ್, ಡಾ. ಉಮ್ಮಪ್ಪ ಪೂಜಾರಿ, ಡಾ. ಶ್ರೀಧರ ಮಣಿಯಾಣಿ, ಡಾ. ಅನುರಾಧ, ಪ್ರೊ.ಜಿ.ಬಿ. ಶೆಟ್ಟಿ ಪ್ರೊ. ಡೊನಾಲ್ಡ್ ಲೋಬೋ, ಡಾ. ಹೆರಾಲ್ಡ್ ಮೋನಿಸ್, ಪ್ರೊ. ಪಾರ್ಶ್ವನಾಥ್ ಅಜಿಲ, ಪ್ರೊ. ಕರುಣಾಕರ ನಾಯಕ್ ಮಾಹಿತಿ ನೀಡಿದರು.
ಮುಕ್ತ ಸಂಘಟನೆ ಅಧ್ಯಕ್ಷೆ ಡಾ. ಆಶಾಲತಾ ಸುವರ್ಣ ಪ್ರಸ್ತಾವನೆಗೈದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ. ಕೃಷ್ಣ ಸ್ವಾಗತಿಸಿದರು, ಪ್ರೊ. ವಿಜಯ್ ವಿ. ಕಾರ್ಯಕ್ರಮ ನಿರೂಪಿಸಿದರು.
ಮುಕ್ತ ಸಂಘಟನೆ ಕಾರ್ಯದರ್ಶಿ ಡಾ. ಹೆರಾಲ್ಡ್ ಮೋನಿಸ್ ವಂದಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆ ಸಹಿತ 167 ಕಾಲೇಜಿನ ವಾಣಿಜ್ಯ ವಿಭಾಗದ ಸುಮಾರು 300ಕ್ಕೂ ಹೆಚ್ಚು ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Kinnigoli-19071602 Kinnigoli-19071603

Comments

comments

Comments are closed.

Read previous post:
Kinnigoli-19071601
ಶೈಕ್ಷಣಿಕವಾಗಿ ಪ್ರಗತಿ ಆರ್ಥಿಕ ಸುದೃಡ

ಕಿನ್ನಿಗೋಳಿ: ಸಮಾಜ ಸೇವಾ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತೆ ಮಾಡಿ ಆರ್ಥಿಕ ಸುದೃಡರಾಗುವಂತೆ ಮಾಡಿ ಅವರಲ್ಲಿ ಸೇವಾ ಮನೋಭಾವನೆ ಮೂಡುವಂತೆ ಮಾಡಬೇಕು...

Close