ಶೈಕ್ಷಣಿಕವಾಗಿ ಪ್ರಗತಿ ಆರ್ಥಿಕ ಸುದೃಡ

ಕಿನ್ನಿಗೋಳಿ: ಸಮಾಜ ಸೇವಾ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತೆ ಮಾಡಿ ಆರ್ಥಿಕ ಸುದೃಡರಾಗುವಂತೆ ಮಾಡಿ ಅವರಲ್ಲಿ ಸೇವಾ ಮನೋಭಾವನೆ ಮೂಡುವಂತೆ ಮಾಡಬೇಕು ಎಂದು ಲಯನ್ಸ್ ಜಿಲ್ಲಾ ೩೧೭ಡಿ. ಜಿಲ್ಲಾ ಉಪ ಗರ್ವನರ್ ಎಚ್. ಆರ್. ಹರೀಶ್ ಎಂದು ಹೇಳಿದರು.
ಭಾನುವಾರ ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಲಯನ್ಸ್ ಮತ್ತು ಲಯೆನೆಸ್ ಕ್ಲಬ್‌ಗಳ 2016-17 ನೇ ಸಾಲಿನ ನೂತನ ಅಧ್ಯಕ್ಷ ವೈ. ಯೋಗೀಶ್ ರಾವ್ ಮತ್ತು ವತ್ಸಲಾ ರಾವ್ ತಂಡಗಳ ಪದಾಧಿಕಾರಿಗಳ ಪದಗ್ರಹಣ ನಡೆಸಿ ಮಾತನಾಡಿದರು.
ಈ ಸಂದರ್ಭ ಏಳಿಂಜೆ ದೇವಳದ ಪ್ರಧಾನ ಅರ್ಚಕ ಗಣೇಶ್ ಭಟ್ ಏಳಿಂಜೆ, ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ, ಕಿನ್ನಿಗೋಳಿ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ ಅವರನ್ನು ಗುರು ವಂದನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪೊಂಪೈ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನರ್ಸಿಂಗ್ ವಿದ್ಯಾರ್ಥಿನಿಯ ಶಿಕ್ಷಣ ವೆಚ್ಚವನ್ನು ನೀಡಲಾಯಿತು.
ಪ್ರಾಂತೀಯ ಅಧ್ಯಕ್ಷ ಮಹಮ್ಮದ್ ಕುಂಜ, ವಲಯ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಎಂ. ಕೆ, ಜಿ. ಆರ್. ಆರ್ ವಿಜಯಕುಮಾರ್ ಕುಬೆವೂರು, ಕಿನ್ನಿಗೋಳಿ ಲಯನ್ಸ್ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಬುಝಂಗ ಬಂಜನ್, ನಿಕಟ ಪೂರ್ವ ಕೋಶಾಧಿಕಾರಿ ಮಹಾಬಲ ರೈ, ಶಾಂಭವಿ ಶೆಟ್ಟಿ, ಕಿನ್ನಿಗೋಳಿ ಲಯನೆಸ್ ಅಧ್ಯಕ್ಷೆ ವತ್ಸಲಾ ರಾವ್, ನಿಕಟಪೂರ್ವ ಅಧ್ಯಕ್ಷೆ ಪ್ರೇಮಲತಾ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ಕಾರ್ಯದರ್ಶಿ ಸವಿತಾ ಪಿ. ಶೆಟ್ಟಿ, ಕೋಶಾಧಿಕಾರಿ ಲೀಲಾ ಬಂಜನ್, ಹಾಗೂ ವಿವಿದ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಂದಿಸಿದರು. ಲಾರೆನ್ಸ್ ಫೆರ್ನಾಂಡಿಸ್ ಮತ್ತು ವಲೇರಿಯನ್ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-19071601

Comments

comments

Comments are closed.

Read previous post:
Kinnigoli-180716020
ಮುಲ್ಕಿ-ಮೂಡಬಿದಿರೆ ಬಿಜೆಪಿ ಪದಗ್ರಹಣ

ಕಿನ್ನಿಗೋಳಿ: ಮುಲ್ಕಿ-ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಜಿ. ಪಂ. ತಾ. ಪಂ. ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಕಂಡಿದೆ. ಬಿಜೆಪಿಯ ವರ್ಚಸ್ಸು ದಿನದಿಂದ ದಿನಕ್ಕೆ...

Close