ಕಲಾ ವಿದ್ಯಾರ್ಥಿಗಳಿಗೂ ಉಜ್ವಲ ಭವಿಷ್ಯವಿದೆ

ಕಿನ್ನಿಗೋಳಿ: ತಮ್ಮ ಪಠ್ಯದ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿ ಸರ್ವಾಂಗೀಣ ಪ್ರಗತಿ ಹೊಂದಬೇಕು ಎಂದು ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೆ.ಸಿ. ಮಿರಾಂಡ ಹೇಳಿದರು.
ಸೋಮವಾರ ನಡೆದ ಐಕಳ ಪೊಂಪೈ ಕಾಲೇಜು ಮಾನವಿಕ ಸಂಘದ 2016-17 ನೇ ಸಾಲಿನ ಕಾರ‍್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ ತರಗತಿಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಪ್ರೊ. ಪಿ.ಬಿ. ಪ್ರಸನ್ನ ಮಾತನಾಡಿ ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಪತ್ರಿಕೋಧ್ಯಮ ಮುಂತಾದ ವಿಷಯಗಳಲ್ಲಿ ಉನ್ನತ ಶಿಕ್ಷಣ ಮತ್ತು ಪರಿಣತಿ ಹೊಂದಿದವರಿಗೆ ವಿಪುಲ ಅವಕಾಶಗಳಿವೆ ಮತ್ತು ಸಮಾಜದಲ್ಲಿಉತ್ತಮ ಸ್ಥಾನಮಾನ ಗಳಿಸಲು ಸಾಧ್ಯ. ಬಿ.ಎ ವಿದ್ಯಾರ್ಥಿಗಳು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಓದುವುದರ ಮೂಲಕ ತಮ್ಮಭಾಷಾeನ ಮತ್ತು ವಿಷಯeನವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಾನವಿಕ ಸಂಘದ ನಿರ್ದೇಶಕ ಪ್ರೊ. ಪುರುಷೋತ್ತಮ ಕೆ.ವಿ, ಪ್ರೊ. ಥೋಮಸ್ ಜಿ ಎಮ್, ಸಮಾಜಶಾಸ್ತ್ರ ವಿಭಾಗದ ಪ್ರೊ. ಯೋಗೀಂದ್ರ ಬಿ ಹಾಗೂ ಇತಿಹಾಸ ವಿಭಾಗದ ವಿಶ್ವಿತ್ ಶೆಟ್ಟಿ, ವಿದ್ಯಾರ್ಥಿ ಮುಖಂಡರಾದ ಗೀತೇಶ್ ಹಾಗೂ ದೀಕ್ಷಾ ಉಪಸ್ಥಿತರಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಪೆನ್ನು, ಪೆನ್ಸಿಲ್ ಹಾಗೂ ಹೂ ಗುಚ್ಛ ನೀಡಿ ಸ್ವಾಗತಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ರೇಷ್ಮ ಸ್ವಾಗತಿಸಿ ಸಿ.ಮಣಿ ವಂದಿಸಿದರು. ಸ್ವಾತಿ ಮತ್ತು ಸಿ.ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Kinnigoli-19071604

Comments

comments

Comments are closed.

Read previous post:
Kinnigoli-19071602
ಶಿಕ್ಷಣ ಕಾಲಕ್ಕೆ ತಕ್ಕಂತೆ ನವೀಕರಣ ಆಗಬೇಕು

ಕಿನ್ನಿಗೋಳಿ: ಕಟೀಲು: ವಾಣಿಜ್ಯ ಉಪನ್ಯಾಸಕರ ಕಾರ್ಯಾಗಾರ ಜಯರಾಂ ಪೂಂಜಾ. ಬಹು ಬೇಡಿಕೆಯ ವಾಣಿಜ್ಯ ವಿಭಾಗದಲ್ಲಿ ಕಾಲ ಕಾಲಕ್ಕೆ ಪಠ್ಯಕ್ರಮ ನವೀಕರಣಗೊಂಡು ಹೊಸ ಹೊಸ ಸವಾಲುಗಳನ್ನು ಎದುರಿಸಲು ನಿರಂತರ ಕಾರ್ಯಾಗಾರ...

Close