ಕಟೀಲು ಪಠ್ಯಪೂರಕ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಾದ ವಿಜ್ಜಾನ ಸಂಘ, ಸಾಹಿತ್ಯ ಸಂಘ, ಜಾನಪದ ಸಂಘ, ಯಕ್ಷಗಾನ ಸಂಘಗಳಲ್ಲಿ ಸಕ್ರಿಯರಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಡಾ.ಕೆ. ರವೀಂದ್ರನಾಥ ಪೂಂಜ ಹೇಳಿದರು.

ಇತ್ತೀಚೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ನಡೆದ ಪಠ್ಯಪೂರಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳು ಮತ್ತು ಅದರ ಹತೋಟಿಯ ಬಗ್ಗೆ ವಿವರ ನೀಡಿದರು.

ಕಟಪಾಡಿ ನಿವೃತ್ತ ಪ್ರಿನಿಪಾಲ್ ಲಕ್ಷೀ ಕೆನರಾ ಬ್ಯಾಂಕ್ ಜುಬಿಲಿ ಎಜುಕೇಶನ್ ಫಂಡ್ ಬೆಂಗಳೂರು ದಿ.ನ್ಯಾಯಮೂರ್ತಿ ಅಮ್ಮೆಂಬಳ ನಾರಾಯಣ ಪೈ ಇವರ ಸ್ಮರಣಾರ್ಥ ಗ್ರಾಮಾಂತರ ಪ್ರದೇಶದ ಕನ್ನಡ ಮಾಧ್ಯಮದ ಆಯ್ದ 11 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮತ್ತು ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯ್ಯಾರ್ಥಿವೇತನ ವಿತರಿಸಿ ಶುಭ ಹಾರೈಸಿದರು.
ಪ್ರೌಢಶಾಲಾ ವೈಸ್ ಪ್ರಿನ್ಸ್‌ಪಾಲ್ ಸೋಮಪ್ಪ ಅಲಂಗಾರ್ ಸ್ವಾಗತಿಸಿದರು. ಅಧ್ಯಾಪಕ ಸಾಯಿನಾಥ ಶೆಟ್ಟಿ ವಂದಿಸಿದರು. ಅಧ್ಯಾಪಕ ಉಮೇಶ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

Kinnigoli-21071609

Comments

comments

Comments are closed.

Read previous post:
Kinnigoli-21071608
ತೋಕೂರು: ಈದುಲ್ ಫಿತ್ರ್ ಸಮಾರಂಭ

ಕಿನ್ನಿಗೋಳಿ: ರಂಜಾನ್ ದಾನ ಧರ್ಮಗಳ ಹಬ್ಬ. ಮನುಷ್ಯನ ಶರೀರವನ್ನು ಪಾಪಗಳಿಂದ ಮುಕ್ತಗೊಳ್ಳಿಸುವ, ಬಡವ-ಬಲ್ಲಿದರೆಂಬ ಭೇದವಿಲ್ಲದೆ ಹೊಸ ಕನಸುಗಳ ಹೊತ್ತು ಸಂಭ್ರಮಿಸುವ ಭ್ರಾತೃತ್ವದ ಸಂದೇಶವನ್ನು ಸಾರುವ ಹಬ್ಬ ಎಂದು ಆರ್.ಸಿ....

Close