ರೈತ ಸಂಪರ್ಕ ಕೇಂದ್ರ ಕಿನ್ನಿಗೋಳಿಯಲ್ಲಿ ಆಗಲಿ

ಕಿನ್ನಿಗೋಳಿ: ಮುಲ್ಕಿ ಹೋಬಳಿಯ ಎಲ್ಲಾ ಗ್ರಾಮೀಣ ಭಾಗದ ಕೃಷಿಕರಿಗೆ ಅನುಕೂಲವಾಗುವಂತೆ ಮುಲ್ಕಿ ರೈತ ಸಂಪರ್ಕ ಕೇಂದ್ರವನ್ನು ಹೋಬಳಿಯ ಕೇಂದ್ರ ಪ್ರದೇಶ ಕಿನ್ನಿಗೋಳಿಯಲ್ಲಿ ಸ್ಥಾಪಿಸಬೇಕು. ಎಂದು ಐಕಳ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೋಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ ಹಾಗೂ ಪಂಚಾಯಿತಿ ಆಡಳಿತಕ್ಕೆ ಒಕ್ಕೋರಲಿನಲ್ಲಿ ಒತ್ತಾಯಿಸಿದರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಐಕಳ ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ 2016-17  ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗುರುವಾರ ಐಕಳ ಗ್ರಾಮ ಪಂಚಾಯಿತಿಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

ಮೂಲ್ಕಿ ಹೋಬಳಿ ರೈತ ಸಂಪರ್ಕ ಕೇಂದ್ರ ಮೂಲ್ಕಿ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿದ್ದು ಬಳ್ಕುಂಜೆ, ಕಿನ್ನಿಗೋಳಿ, ಐಕಳ, ಪಟ್ಟೆ , ಏಳಿಂಜೆ ಮೆನ್ನಬೆಟ್ಟು, ಕೊಂಡೆಮೂಲ, ಕಿಲೆಂಜೂರು ನಡುಗೋಡು ಕೆಮ್ರಾಲ್. ಪಂಜ ಕೊಕುಡೆ ಗ್ರಾಮಗಳ ಗ್ರಾಮಸ್ಥರಿಗೆ ಕಾರ್ನಾಡಿಗೆ ಹೋಗಲು ಕಷ್ಟ ಅಲ್ಲದೆ ರಿಕ್ಷಾದಲ್ಲಿ ಕೃಷಿ ಸಲಕರಣೆ ಹಾಗೂ ಬೀಜ ಗೊಬ್ಬರ ಸಾಗಿಸಲು ಹೆಚ್ಚಿನ ಬಾಡಿಗೆ ನೀಡಬೇಕಾಗಿದೆ. ಕೆಲವು ಸಮಯ ಮಾತ್ರ ತೆರೆದಿರುತ್ತದೆ ಸಿಬ್ಬಂದಿ ಕೊರತೆ ಕೂಡಾ ಕಂಡು ಬರುತ್ತಿದೆ. ಈ ಬಗ್ಗೆ ಮುಲ್ಕಿ ಹೋಬಳಿಗಳ ಪಂಚಾಯಿತಿ ಆಡಳಿತಗಳು ಹಾಗೂ ಜಿಲ್ಲಾಡಳಿತಕ್ಕೂ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕಿನ್ನಿಗೋಳಿ ಪರಿಸರದಲ್ಲಿ ರೈತ ಸಂಪರ್ಕ ಕೇಂದ್ರ ಅಥವಾ ಶಾಖೆಯನ್ನು ತೆರೆದರೆ ಕೃಷಿಕರಿಗೆ ತುಂಬಾ ಅನೂಕೂಲವಾಗುತ್ತದೆ. ಸರಕಾರಕ್ಕೂ ಈ ಬಗ್ಗೆ ಮನವಿ ನೀಡಿ ಗ್ರಾಮಸ್ಥರಾದ ಸುಧಾಮ ಶೆಟ್ಟಿ ಮತ್ತು ವಸಂತ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿ. ಪಂ. ಸದಸ್ಯ ವಿನೋದ್ ಕುಮಾರ್ ತಿಳಿಸಿದರು.

ಸರಕಾರದ ಜಾಗದಲ್ಲಿ ಅಕ್ರಮ ನಿವೇಶನ ಮಾಡಿದ ಜನರು ಜಾಗವನ್ನು ಸಕ್ರಮ ಮಾಡಲು 94ಸಿ ಅರ್ಜಿಗಳನ್ನು ಸಲ್ಲಿಸಿದ್ದರು ಆದರೆ ಇದೀಗ ಅರ್ಜಿಗಳು ತಿರಸ್ಕಾರಗೊಂಡಿದೆ ಇದಕ್ಕೆ ಏನು ಪರ್ಯಾಯ ಮಾರ್ಗ ಎಂದು ಗ್ರಾಮ ಸಭೆಯಲ್ಲಿ ಜನರು ಅವಲತ್ತುಕೊಂಡರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹತ್ತಿರದ ಪ್ರದೇಶಗಳಾಗಿ ಮುಲ್ಕಿ ಹೋಬಳಿ ಗ್ರಾಮಗಳು ಬರುವುದರಿಂದ ಜನರು ಸರಕಾರದ ಆದೇಶದ ಪ್ರಕಾರ 94ಸಿಸಿ ಅಡಿಯಲ್ಲಿ ನೂತನ ಅರ್ಜಿಯನ್ನು ನೀಡಬೇಕು ಎಂದು ಇಲಾಖಾಧಿಕಾರಿಗಳು ಹೇಳಿದರು.

ಐಕಳ ಶುಂಠಿಪಾಡಿಯಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಕೃಷಿ ಕಾರ್ಯ ಮಾಡಲು ರೈತರು ಅಂಜುತ್ತಿದ್ದಾರೆ. ಚಿರತೆಯನ್ನು ಹಿಡಿಯಲು ಬೋನು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ಅರಣ್ಯ ಇಲಾಖೆಯ ಕಿರಣ್ ಎಂ. ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಐಕಳ ಗ್ರಾ.ಪಂ. ಉಪಾಧ್ಯಕ್ಷೆ ಸುಂದರಿ ಸಾಲಿಯಾನ್, ಪಿಡಿಒ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

Kinnigoli-210716010

Comments

comments

Comments are closed.

Read previous post:
Kinnigoli-21071609
ಕಟೀಲು ಪಠ್ಯಪೂರಕ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಾದ ವಿಜ್ಜಾನ ಸಂಘ, ಸಾಹಿತ್ಯ ಸಂಘ, ಜಾನಪದ ಸಂಘ, ಯಕ್ಷಗಾನ ಸಂಘಗಳಲ್ಲಿ ಸಕ್ರಿಯರಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು...

Close