ತೋಕೂರು: ಈದುಲ್ ಫಿತ್ರ್ ಸಮಾರಂಭ

ಕಿನ್ನಿಗೋಳಿ: ರಂಜಾನ್ ದಾನ ಧರ್ಮಗಳ ಹಬ್ಬ. ಮನುಷ್ಯನ ಶರೀರವನ್ನು ಪಾಪಗಳಿಂದ ಮುಕ್ತಗೊಳ್ಳಿಸುವ, ಬಡವ-ಬಲ್ಲಿದರೆಂಬ ಭೇದವಿಲ್ಲದೆ ಹೊಸ ಕನಸುಗಳ ಹೊತ್ತು ಸಂಭ್ರಮಿಸುವ ಭ್ರಾತೃತ್ವದ ಸಂದೇಶವನ್ನು ಸಾರುವ ಹಬ್ಬ ಎಂದು ಆರ್.ಸಿ. ರಿಜನ್ 15, ಲಯನ್ಸ್ ಕ್ಲಬ್ಬ್ ತಾಲ್ಲೂಕು 317 ಆ ಯ ಸದಸ್ಯರಾದ ಮೊದಿನ್ ಕುಂಞ ಹೇಳಿದರು. ತೋಕೂರಿನ ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತಿಚೆಗೆ ನಡೆದ ಈದುಲ್ ಫಿತ್ರ್ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯಾದವ ದೇವಾಡಿಗ ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ರಾಹಿಲ್ ಯೂಸುಫ್ ಅಬೂಬಕ್ಕರ್ ಹಾಗೂ ಮಹಮ್ಮದ್ ಫಾಹಿಜ್ ಕುರಾನ್ ಪಠಣ ಮಾಡಿದರು. ಎಂಟನೇ ತರಗತಿಯ ವಿದ್ಯಾರ್ಥಿಗಳು ಉತ್ತರ ಕೇರಳದ ಮಾಪಿಳ್ಳೆ ಸಮುದಾಯದ ಜನಪ್ರಿಯ ಒಪ್ಪಣ ನೃತ್ಯವನ್ನು ಪ್ರದರ್ಶಿಸಿದರು. ಅಬ್ದುಲ್ ಶದೀದ್ ಹೆಜಮಾಡಿ ಈದುಲ್ ಫಿತ್ರ್ ಆಚರಣೆಯ ಮಹತ್ವವನ್ನು ವಿವರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್ ಸ್ವಾಗತಿಸಿದರು. ಆತೀಫ್ ಹುಸೇನ್ ಶೇಕ್ ವಂದಿಸಿದರು. ರಫಾ ಸುಲ್ತಾನ ಕಾರ್ಯಕ್ರಮವನ್ನು ನಿರೂಪಿಸಿದರು.

Kinnigoli-21071608

Comments

comments

Comments are closed.