ಶಿಕ್ಷಣ, ನಾಯಕತ್ವ ಜೊತೆ ಜೊತೆಯಾಗಿ ಸಾಗಲಿ

ಮೂಲ್ಕಿ: ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಹಂತದಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಶೃಜನಶೀಲರಾಗಿ ಬೆಳಗಲು ಸಾಧ್ಯ ಎಂದು ನ್ಯಾಯವಾದಿ ಎಮ್ ಭಾಸ್ಕರ್ ಹೆಗ್ಡೆ ನುಡಿದರು.

ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಯಕತ್ವ ಗುಣಗಳು ಭವಿಷ್ಯ ಜೀವನದಲ್ಲಿ ಪ್ರಭುತ್ವತೆ ಗಳಿಸಲು ಸಾಧ್ಯವಾಗುತ್ತದೆ. ಪಟ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶಾಲಾ ಸಂಸತ್ತಿನಲ್ಲಿ ಭಾಗವಹಿಸುವ ಸಂದರ್ಭ ಸಂಪೂರ್ಣ ಮಾಹಿತಿಗಳನ್ನು ಕ್ರೋಡೀಕರಣಗೊಳಿಸಿ ಆಡಳಿತ ಪಕ್ಷದಂತೆ ವಿರೋಧ ಪಕ್ಷವನ್ನು ಪರಿಪಕ್ವವಾಗಿಸಿಕೊಳ್ಳಿ. ಶಿಕ್ಷಣ ಮತ್ತು ನಾಯಕತ್ವ ಜೊತೆ ಜೊತೆಯಾಗಿ ಸಾಗಲಿ ಎಂದರು.
ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಪಿ ಸಾಲ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕರಾದ ಎಚ್.ವಿ ಕೋಟ್ಯಾನ್, ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಪ್ರಾಂಶುಪಾಲ ಯತೀಶ್ ಅಮೀನ್ , ಪಾರ್ಲಿಮೆಂಟ್‌ನ ನಿರ್ದೇಶಕ ಹೇಮರಾಜ್ ಕೆ , ವಿದ್ಯಾರ್ಥಿ ನಾಯಕರಾದ ಪ್ರಜ್ವಲ್ ಡೇಸಾ ಹಾಗೂ ನೀಲ್ ಕುಟಿನ್ಹೊ ವೇದಿಕೆಯಲ್ಲಿದ್ದರು. ಧನುಷ್ , ಪ್ರಾರ್ಥಿಸಿದರು. ಕಾರ್ಯದರ್ಶಿ ಬಾಲಚಂದ್ರ ಸನಿಲ್ ಸ್ವಾಗತಿಸಿದರು. ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯಸ್ ಧನ್ಯವಾದಗೈದರು.

Mulki-21071601

Comments

comments

Comments are closed.

Read previous post:
Kinnigoli-19071604
ಕಲಾ ವಿದ್ಯಾರ್ಥಿಗಳಿಗೂ ಉಜ್ವಲ ಭವಿಷ್ಯವಿದೆ

ಕಿನ್ನಿಗೋಳಿ: ತಮ್ಮ ಪಠ್ಯದ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿ ಸರ್ವಾಂಗೀಣ ಪ್ರಗತಿ ಹೊಂದಬೇಕು ಎಂದು ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೆ.ಸಿ. ಮಿರಾಂಡ ಹೇಳಿದರು. ಸೋಮವಾರ...

Close