ಶದ್ದಾಂಜಲಿ ಸಭೆ

ಹಳೆಯಂಗಡಿ: ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟಿಸುವುದರೊಂದಿಗೆ ದೀನವರ್ಗದ ಆಶ್ರಯದಾತರಾಗಿ ಸನತ್ ಕುಮಾರ್ ರವರನ್ನು ಅಕಾಲಿಕವಾಗಿ ಕಳೆದುಕೊಂಡಿರುವುದು ಸಮಾಜದ ರ್ದೌಭಾಗ್ಯ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಛಾದ ರಾಜ್ಯ ಕಾರ್ಯದರ್ಶಿ ಸತ್ಯಜೀತ್ ಸುರತ್ಕಲ್ ಹೇಳಿದರು.
ಇತ್ತೀಚೆಗೆ ಆಕಾಲಿಕವಾಗಿ ಸಾವಿಗೀಡಾದ ಯುವ ಸಂಘಟಕ ಸನತ್ ಕುಮಾರ್ ರವರ ಬಗ್ಗೆ ಹಳೆಯಂಗಡಿ ಶ್ರೀ ಜಾರಂದಾಯ ಸಾನದ ಸಭಾಗ್ರಹದಲ್ಲಿ ಗುರುವಾರ ನಡೆದ ಶದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಆಕಸ್ಮಿಕ ಸಾವು ನಿಶ್ಚಿತ ಆದರೆ ಸನತ್ ಕುಮಾರ್ ರವರಂತ ಯುವ ಪ್ರತಿಭೆ ಸಮಾಜ ಮತ್ತು ಸಂಘಟನೆಗಾಗಿ ಬಿಟ್ಟು ಹೋಗಿರುವ ಆದರ್ಶವನ್ನು ಮುಂದುವರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸವಾಗಬೇಕು ಎಂದರು.
ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಮಾತನಾಡಿ, ಹಳೆಯಂಗಡಿ ಗ್ರಾಮೀಣ ಪರಿಸರದಲ್ಲಿ ಪಕ್ಷ ಸಂಘಟನೆಯೊಂದಿಗೆ ಬಡ ಜನರ ಉದ್ದಾರಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದ ಯುವಕನ ಆದರ್ಶ ಇಂದು ನಮ್ಮ ಮುಂದಿದೆ. ಸನತ್ ಬಿಟ್ಟು ಹೋಗಿರುವ ಆಸೆ ಆಕಾಂಕ್ಷೆಗಳು ಮತ್ತು ಆದರ್ಶ ಮುಂದುವರಿಸುವಂತಾಗಬೇಕು ಮಗನನ್ನು ಕಳೆದುಕೊಂಡ ತಾಯಿಗೆ ನಮ್ಮ ಯುವ ಸಮಾಜ ಮಕ್ಕಳಂತಿದ್ದು ಅವರ ಕಷ್ಟಕ್ಕೆ ನೆರವಾಗಬೇಕು ಎಂದು ಗದ್ಘಿತರಾಗಿ ನುಡಿದರು.
ಈ ಸಂದರ್ಭ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮೂಲ್ಕಿ ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಉಪಸ್ಥಿತರಿದ್ದರು. ವಿನೋದ್ ಸಾಲ್ಯಾನ್ ಪ್ರಸ್ತಾವಿಸಿದರು. ರಾಮಚಂದ್ರ ಶೆಣೈ ವಂದಿಸಿದರು.

Mulki-22071602

Comments

comments

Comments are closed.

Read previous post:
Mulki-22071601
ಎಂ.ರಮೇಶ್ ಕಾಮತ್

ಮೂಲ್ಕಿ: ಚರಂತಿ ಪೇಟೆ ನಿವಾಸಿ ಎಂ ರಮೇಶ್ ಕಾಮತ್(64) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಕೆನರಾ ಬ್ಯಾಂಕ್ ನಿವೃತ್ತ ಸಿಬ್ಬಂದಿಯಾಗಿದ್ದ ಅವರು ಶ್ರೇಷ್ಠ ಗಾಯಕರು ಮತ್ತು...

Close