ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಅರಿವು

ಮೂಲ್ಕಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಕರ್ನಾಟಕ ಮತ್ತು ಮೂಲ್ಕಿಯ ವಿಜಯಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಜಯಾ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ಕಾರ್ಯಗಾರ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಅರವಿಂದ ಡಿ. ಬಾಳರಿ, ಉಪನಿರ್ದೇಶಕರು, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಕರ್ನಾಟಕ, ಶ್ರೀಯುತ ರವೀಂದ್ರ ಬಲ್ಲಾಳ್, ಹಿರಿಯ ಸಲಹೆಗಾರರು, ಜ್ಞಾನಜ್ಯೋತಿ ಟ್ರಸ್ಟ್, ಮಣಿಪಾಲ, ಶ್ರೀಯುತ ಸತೀಶ್ ಮಾಬೆನ್, ತರಬೇತುದಾರರು ತರಬೇತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಕೆ.ಆರ್.ಶಂಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಅನಸೂಯಾ ಟಿ ಕರ್ಕೇರ, ನಿಯೋಜಿತ ಪ್ರಾಂಶುಪಾಲರಾದ ಡಾ| ನಾರಾಯಣ ಪೂಜಾರಿ ಹಾಗೂ ಪ್ರೊಫೆಸರ್ ಎಂ. ಚೆನ್ನ ಪೂಜಾರಿ, ಅರ್ಥಶಾಸ್ತ್ರ ವಿಭಾಗ ಉಪಸ್ಥಿತರಿದ್ದರು.
ಕುಮಾರಿ ಅಮೂಲ್ಯ, ತೃತೀಯ ಬಿ.ಎಸ್ಸಿ. ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಕುಮಾರಿ ಅರುಣಾ ವಂದಿಸಿದರು. ಕಾರ್ಯಕ್ರಮದ ಮುಖ್ಯ ಉಪನ್ಯಾಸಕ ಸಲಹೆಗಾರರಾದ ಕುಮಾರಿ ಸ್ವಾತಿ ಬಿ.ಶೆಟ್ಟಿ, ವಾಣಿಜ್ಯಶಾಸ್ತ್ರ ವಿಭಾಗ ಕಾರ್ಯಕ್ರಮವನ್ನು ಸಂಯೋಜಿಸಿದರು.

Mulki-22071603

Comments

comments

Comments are closed.

Read previous post:
Mulki-22071602
ಶದ್ದಾಂಜಲಿ ಸಭೆ

ಹಳೆಯಂಗಡಿ: ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟಿಸುವುದರೊಂದಿಗೆ ದೀನವರ್ಗದ ಆಶ್ರಯದಾತರಾಗಿ ಸನತ್ ಕುಮಾರ್ ರವರನ್ನು ಅಕಾಲಿಕವಾಗಿ ಕಳೆದುಕೊಂಡಿರುವುದು ಸಮಾಜದ ರ್ದೌಭಾಗ್ಯ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಛಾದ ರಾಜ್ಯ...

Close