ಕಟೀಲು ಕಾಲೇಜು ವಾದ್ಯ ಸಂಗೀತ ಗೋಷ್ಠಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉಡುಪ ಫೌಂಡೇಶನ್ ವತಿಯಿಂದ ಮಂಗಳವಾರ ವಾದ್ಯ ಸಂಗೀತ ಗೋಷ್ಠಿ ನಡೆಯಿತು. ಅಂತರಾಷ್ಟ್ರೀಯ ಕಲಾವಿದರಾದ ಗಿರಿಧರ್ ಉಡುಪ ಘಟಂ, ಜಯಚಂದ್ರ ರಾವ್ ಮೃದಂಗ, ಕಾರ್ತಿಕ್ ನಾಗರಾಜ್ ವಯೋಲಿನ್ ನುಡಿಸಿದರು.
ಕಾರ್ಯಕ್ರಮದಲ್ಲಿ ಹಂಸಧ್ವನಿ ರಾಗ, ಆದಿತಾಳ, ಗಣೇಶ ಸ್ತುತಿ ಮೊದಲಾದ ಕಾರ್ಯಕ್ರಮದೊಂದಿಗೆ ಸೀಮಿತ ಅವಧಿಯಲ್ಲಿ ತಾವು ನುಡಿಸಿದ ವಾದ್ಯಗಳ ಬಗ್ಗೆ ಪರಿಚಯ ನೀಡಿ ವಿದ್ಯಾರ್ಥಿಗಳಲ್ಲಿ ವಾದ್ಯ ಶಾಸ್ತ್ರೀಯ ಸಂಗೀತ ದ ಅರಿವು ಮೂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳು ವಾದ್ಯ ಸಂಗೀತದ ಬಗ್ಗೆ ಕಲಾವಿದರಲ್ಲಿ ಸಂವಾದ ನಡೆಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸ್‌ಪಾಲ್ ಎಂ.ಬಾಲಕೃಷ್ಣ ಶೆಟ್ಟಿ, ಲಲಿತ ಕಲಾ ಸಂಘದ ನಿರ್ದೇಶಕ ಡಾ. ಗಣಪತಿ ಭಟ್, ಕಾಲೇಜು ವಿದ್ಯಾರ್ಥಿ ನಾಯಕ ಪ್ರಜ್ವಲ್, ಅನುಜ್ಞಾ ಭಟ್ ಉಪಸ್ಥಿತರಿದ್ದರು.

Kinnigoli-23071603

Comments

comments

Comments are closed.

Read previous post:
Kinnigoli-23071602
ಜನರ ಬವಣೆಗಳಿಗೆ ಸ್ಪಂದನೆ ನೀಡಬೇಕು

ಕಿನ್ನಿಗೋಳಿ: ಜನರ ಬವಣೆಗಳಿಗೆ ಇಲಾಖಾಧಿಕಾರಿಗಳು ಕಾನೂನು ರೀತಿಯಲ್ಲಿ ನ್ಯಾಯಯುತ ಸ್ಪಂದನೆ ನೀಡಿದಾಗ ಸಮಾಜ ಹಾಗೂ ಜನರು ತಪ್ಪು ದಾರಿಗಿಳಿಯುವುದಿಲ್ಲ ಎಂದು ಮಂಗಳೂರು ಉತ್ತರ ವಲಯ ಸಂಚಾರಿ ವಿಭಾಗ ಪೋಲಿಸ್...

Close