ಜನರ ಬವಣೆಗಳಿಗೆ ಸ್ಪಂದನೆ ನೀಡಬೇಕು

ಕಿನ್ನಿಗೋಳಿ: ಜನರ ಬವಣೆಗಳಿಗೆ ಇಲಾಖಾಧಿಕಾರಿಗಳು ಕಾನೂನು ರೀತಿಯಲ್ಲಿ ನ್ಯಾಯಯುತ ಸ್ಪಂದನೆ ನೀಡಿದಾಗ ಸಮಾಜ ಹಾಗೂ ಜನರು ತಪ್ಪು ದಾರಿಗಿಳಿಯುವುದಿಲ್ಲ ಎಂದು ಮಂಗಳೂರು ಉತ್ತರ ವಲಯ ಸಂಚಾರಿ ವಿಭಾಗ ಪೋಲಿಸ್ ನಿರೀಕ್ಷಕ ಮಂಜುನಾಥ ಹೇಳಿದರು.
ಗುರುವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಕಿನ್ನಿಗೋಳಿ ನಾಗರಿಕ ಸಮ್ಮಾನ ಸಮಿತಿ ಆಶ್ರಯದಲ್ಲಿ ಮೂಲ್ಕಿಯಿಂದ ಮೂಡಬಿದಿರೆಗೆ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡ ರಾಮಚಂದ್ರ ನಾಯಕ್ ಕೆ ಬಿಳ್ಕೋಡುಗೆ ಸಮಾರಂಭ ಹಾಗೂ ಮೂಡಬಿದಿರೆಯಿಂದ ಮೂಲ್ಕಿಗೆ ವೃತ್ತ ನಿರೀಕ್ಷಕರಾಗಿ ಆಗಮಿಸಿದ ಅನಂತಪದ್ಮನಾಭ ಅವರಿಗೆ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೌಹಾರ್ದಯುತ ಸುಶಿಕ್ಷಿತ ಜನರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಣುತ್ತದೆ ಸಮಾಜದ ಕುಂದು ಕೊರತೆಗಳನ್ನು ತಿದ್ದಿ ತೀಡುವ ಕೆಲಸ ಪೋಲೀಸ್ ಇಲಾಖೆಯಿಂದ ಆಗುತ್ತದೆ. ಎಂದು ಮೂಲ್ಕಿಯಿಂದ ಮೂಡಬಿದಿರೆಗೆ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡ ರಾಮಚಂದ್ರ ನಾಯಕ್ ಕೆ ಬೀಳ್ಕೂಡುಗೆ ಸಮಾರಂಭದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಮೂಲ್ಕಿಗೆ ಪೋಲಿಸ್ ನಿರೀಕ್ಷಕರಾಗಿ ಆಗಮಿಸಿದ ಅನಂತಪದ್ಮನಾಭ ಹಾಗೂ ಕಿನ್ನಿಗೋಳಿ ಉಪವಲಯ ಅರಣ್ಯಧಿಕಾರಿಯಾಗಿ ಆಗಮಿಸಿದ ಕೆ. ಸಿ. ಮ್ಯಾಥ್ಯೂ ಅವರನ್ನು ಅಭಿನಂದಿಸಲಾಯಿತು.
ಕಟೀಲು ದೇವಳ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಸುನಿಲ್ ಪ್ರವೀಣ್ ಪಿಂಟೋ, ಕಿನ್ನಿಗೋಳಿ ಎಂ. ಜೆ. ಎಂ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ಎಳತ್ತೂರು ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಡೋನಿ ಸುವಾರಿಸ್ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ವಲಯ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23071602

Comments

comments

Comments are closed.

Read previous post:
Kinnigoli-23071601
ಮೆನ್ನಬೆಟ್ಟು : ನೀರಿನ ದರ ಏರಿಕೆ ಯಾಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಎದುರಿನ ಅಂಗಡಿ ಸಮುಚ್ಚಯವನ್ನು ಕೆಡವುವ ಹಾಗೂ ಇಲ್ಲೇ ಹೊಸಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆ ಯಾಕೆ? ನೀರಿನ ದರ ಏರಿಸುವುದು ಯಾಕೆ ಎಂದು ಮೆನ್ನಬೆಟ್ಟು...

Close