ಮೆನ್ನಬೆಟ್ಟು : ನೀರಿನ ದರ ಏರಿಕೆ ಯಾಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಎದುರಿನ ಅಂಗಡಿ ಸಮುಚ್ಚಯವನ್ನು ಕೆಡವುವ ಹಾಗೂ ಇಲ್ಲೇ ಹೊಸಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆ ಯಾಕೆ? ನೀರಿನ ದರ ಏರಿಸುವುದು ಯಾಕೆ ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ೨೦೧೬-೧೭ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಕೇಳಿದರು.
ರೂ. ೧೦ ಲಕ್ಷ ವೆಚ್ಚದಲ್ಲಿ ಹೊಸ ಅಂಗಡಿ ಕಟ್ಟಡ ನಿರ್ಮಾಣದ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು ಈ ಬಗ್ಗೆ ಮಾರ್ಚ್‌ನಲ್ಲಿಯೇ ನೋಟೀಸು ನೀಡಲಾಗಿದ್ದು ಹಾಗೂ ಮುಂದಿನ ಮಳೆಗಾಲ ಮುಗಿದ ಕೂಡಲೇ ಕಟ್ಟಡ ರಚಿಸಿ ಏಲಂ ಮಾಡಿ ಅಂಗಡಿಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಪಂಚಯಿತಿ ಆಡಳಿತ ತಿಳಿಸಿತು.
ನೀರಿನ ದರ ಎರಿಕೇ ಯಾಕೆ? ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ ಮೊದಲು ನೀರು ಕೊಡಿ ನಂತರ ನೀರಿನ ದರ ಏರಿಸಿ ಎಂಬ ಏರು ದನಿಯ ಜನರ ಪ್ರಶ್ನೆಗೆ ಉತ್ತರಿಸಿದ ನೀರು ಸಮಿತಿಯ ಶ್ರೀಧರ ಶೆಟ್ಟಿ ಮಾತನಾಡಿ ನೀರು ಸರಭರಾಜಾಗುವ ಪಂಪ್ ನ ವಿದ್ಯುತ್ ಬಿಲ್ಲು, ದುರಸ್ತಿ ವೆಚ್ಚ ಹಾಗೂ ನೀರು ಸರಭರಾಜು ಮಾಡುವ ನಿರ್ವಾಹಕರ ವೇತನ ದುಬಾರಿ ಆಗಿದ್ದು ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಸ್ವಪ್ಪ ಮಟ್ಟಿಗೆ ಎರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅನುದಾನದಿಂದ ನೀಡುವ ಹಣ, ನೀರಿನ ವಿದ್ಯುತ್ ಬಿಲ್ಲು ನೀಡಲು ಅಸಾಧ್ಯವಾಗಲಿದೆ ಹಾಗಾಗಿ ಸ್ವಲ್ಪ ಮಟ್ಟಿನ ನೀರಿನ ದರ ಏರಿಸಲಾಗಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ಮೊರ್ಗನ್ ವಿಲಿಯಂ ತಿಳಿಸಿದರು.
ಕಿನ್ನಿಗೋಳಿ ವಿಭಾಗಕ್ಕೆ ವಿದ್ಯುತ್ ಉಪಕೇಂದ್ರ ನಿರ್ಮಾಣ ಆಗುವಂತೆ ನಿರ್ಣಯ ಮಾಡಬೇಕು ಮೂಲ್ಕಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಕಿನ್ನಿಗೋಳಿಯಲ್ಲಿ ಮಾಡಬೇಕು, ಉಲ್ಲಂಜೆಯ ಇಕ್ಕಟ್ಟಾದ ರಸ್ತೆ ಮೋರಿಯನ್ನು ಅಗಲಗೊಳಿಸಿ, ಬೀದಿನಾಯಿಗಳ ಕಾಟ, ನೇಕಾರ ಕಾಲೋನಿಯಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ತೋಟಗಾರಿಕೆ ಇಲಾಖೆಯ ಏಕಾಂತ್ ನೋಡಲ್ ಅದಿಕಾರಿಯಾಗಿ ಭಾಗವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಪಿ.ಡಿ.ಓ ರಮ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Kinnigoli-23071601

Comments

comments

Comments are closed.

Read previous post:
Mulki-22071603
ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಅರಿವು

ಮೂಲ್ಕಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಕರ್ನಾಟಕ ಮತ್ತು ಮೂಲ್ಕಿಯ ವಿಜಯಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಜಯಾ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ...

Close