ಹಳೆಯಂಗಡಿ: ಬಿಲ್ಲವ ಆಟಿದ ಆಯನ

ಮೂಲ್ಕಿ: ಕರಾವಳಿಯ ಜಾನಪದ ಕೃಷಿ ಮನೆತನದ ಸಾಂಸ್ಕೃತಿಕ ವೈಭವವನ್ನು ಅರಳಿಸುವ ಆಷಾಢ ಮಾಸದ ನೆನಪನ್ನು ವಿವಿಧ ಸಂಘ ಸಂಸ್ಥೆಗಳು ಆಚರಿಸುವ ಮೂಲಕ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಂಸ್ಕೃತಿಯ ಹರಿವಿಗೆ ಆದ್ಯತೆ ನೀಡುವಂತಾಗಿದೆ ಎಂದು ಅಂಕಣಕಾರ ಜಾನಪದ ವಿದ್ವಾಂಸ ಡಾ.ಗಣೇಶ್ ಅಮಿನ್ ಸಂಕಮಾರ್ ಹೇಳಿದರು.
ಅವರು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮತ್ತು ಬಿಲ್ಲವ ಸಂಘದ ಜಂಟಿ ಸಂಯೋಜನೆಯಲ್ಲಿ ನಡೆದ ಆಟಿದ ಆಯನ ಕಾರ್ಯಕ್ರಮದಲ್ಲಿ ಆಷಾಢ ಮಾಸದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಆಷಾಡ ಆಚರಣೆಯ ವೈಜ್ಞಾನಿಕ ತಿರುಳನ್ನು ಯುವ ಸಮಾಜಕ್ಕೆ ತಿಳಿಸುವುದರ ಜೊತೆಗೆ ಅವರ ಆಸಕ್ತಿ ಹೆಚ್ಚಿಸಲು ಪ್ರತೀ ಮನೆಯಲ್ಲಿ ಈ ಆಚರಣೆಗಳು ನಡೆಯಬೇಕಾಗಿದೆ. ಸಮಾಜ ಸೇವಾ ಸಂಸ್ಥೆಗಳು ಸಂಸ್ಕೃತಿ ಸಂಸ್ಕಾರ ಬಿಂಬಿಸುವ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ಸರಿಯಾಗಿ ರೂಪಿಸಿದಲ್ಲಿ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯ ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ಜಿ. ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕೋಟಿ ಚೆನ್ನಯ್ಯರು ಆರಾಧಿಸಿದ್ದ ಕೆಮ್ಮಲಾಜೆಯ ನಾಗಬ್ರಹ್ಮ ಗುಡಿಯ ಆಕರ್ಷಕ ರಂಗ ವಿನ್ಯಾಸದ ವೇದಿಕೆಯಲ್ಲಿ ಜೋಡು ನಂದಾ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಚಿತ್ರನಟ ಅರವಿಂದ ಬೋಳಾರ್‌ರನ್ನು ಕಲಾ ಸೇವೆಗಾಗಿ ಗೌರವಿಸಲಾಯಿತು.
ಪ್ರಗತಿ ಪರ ಕೃಷಿಕ ತಿಮ್ಮಪ್ಪ ಅಮೀನ್ ನಾನಿಲ್, ದ.ಕ.ಜಿಲ್ಲಾ ಪಂಚಾಯತ್‌ನ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರುರವರನ್ನು ಆಟಿದ ಆಯನ ಪ್ರಯುಕ್ತ ಸನ್ಮಾನಿಲಾಯಿತು.
ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಹಳೆಯಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ರಮೇಶ್ ಬಂಗೇರ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಎಚ್. ಭಾಸ್ಕರ ಸಾಲ್ಯಾನ್ ಪ್ರಸ್ತಾವಗೈದು, ಸನ್ಮಾನಿತರನ್ನು ಪರಿಚಯಿಸಿದರು, ಯುವವಾಹಿನಿ ಅಧ್ಯಕ್ಷ ದೀಪಕ್ ನಾನಿಲ್ ವಂದಿಸಿದರು, ಹಿಮಕರ್ ಡಿ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಕೋಟಿ ಚೆನ್ನಯ್ಯರು ಆರಾಧಿಸಿದ್ದ ಕೆಮ್ಮಲಾಜೆಯ ನಾಗಬ್ರಹ್ಮ ಗುಡಿಯ ಆಕರ್ಷಕ ರಂಗ ವಿನ್ಯಾಸದ ವೇದಿಕೆಯಲ್ಲಿ ಹಳೆಯಂಗಡಿ ಯುವವಾಹಿನಿ ಸದಸ್ಯರು ಅವಳಿಗಳಾದ ಹೇಮಂತ್ ಮತ್ತು ಹೇಮಾಕ್ಷ ಅವಳಿ ವೀರರ ರೂಪದಲ್ಲಿ ನಡೆಸಿದ ಕೋಟಿ ಚೆನ್ನಯ್ಯ ಕಿರು ರೂಪಕದೊಂದಿಗೆ ಕಾರ್ಯಕ್ರಮದ ಪ್ರಾರಂಭ.
ಸಾಧಕರಿಗೆ ಸನ್ಮಾನ, ಆಟಿಯ ಆಚರಣೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ.
ಉದ್ಘಾಟನೆಯ ಬಳಿಕ ಬಂದವರಿಗೆಲ್ಲಾ ಗೆಣಸಿನ ಬಿಸಿ ಪೋಟಿ ಮತ್ತು ಕೊತ್ತಂಬರಿ ಜೀರಿಗೆ ಕರಿಮೆಣಸು ಕಶಾಯ.
ವಿವಿಧ ಆಟಿ ಖಾಧ್ಯಗಳಾದ, ತೆಕ್ಕರೆ ತಲ್ಲಿ, ತಿಮರೆ ಚಟ್ನಿ, ಪೂಂಬೆ ಚಟ್ನಿ,ರಚ್ಚ-ಗೂಂಜಿ ಚಟ್ನಿ, ಉದ್ದು ಚಟ್ನಿ, ಕಣಿಲೆ -ಪದೆಂಗಿ ಗಸಿ,ತೊಜಂಕ್-ಬೋಲೆ ಸುಕ್ಕ, ತೇಟ್ಲ,ಬಂಬೆ- ಕುಡುಗಸಿ, ಅರೆಪುದಡ್ಡೆ, ಅನ್ನ- ಕುಡು ಸಾರು,ಗಂಧಸಲೆ ಅಕ್ಕಿ ಪಾಯಸ.
ಕಾರ್ಯಕ್ರಮದ ಮೊದಲು ಸಂಜೆ ಗಂಟೆ 4:30ರಿಂದ ಎಂ.ಆರ್.ಪಿ.ಎಲ್ ಯಕ್ಷ ಕಲಾ ತಂಡದವರಿಂದ ಮಹಿಷ ಮರ್ದಿನಿ ಯಕ್ಷಗಾನ ನಡೆಯಿತು.

Mulki-25071602

Comments

comments

Comments are closed.

Read previous post:
Mulki-25071601
ಹಳೆಯಂಗಡಿ: ಸುಧಾಕರ ಆರ್ ಅಮೀನ್ ಆಯ್ಕೆ

ಮೂಲ್ಕಿ: ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾಗಿ ಸುಧಾಕರ ಆರ್ ಅಮೀನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಶೇಖರ ಜಿ, ಗೌ.ಪ್ರ ಕಾರ್ಯದರ್ಶಿ ನಾಗೇಶ್ ಟಿ.ಜಿ, ಜೊತೆ ಕಾರ್ಯದರ್ಶಿ...

Close