ಕಟೀಲು ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಗಾಯತ್ರೀಮಂತ್ರ ಜಪದಿಂದ ಬ್ರಾಹ್ಮಣರು ಶ್ರೇಷ್ಟರಾಗಿ ಗುರುತಿಸಿ ಕೊಂಡಿದ್ದಾರೆ. ಬ್ರಾಹ್ಮಣರು ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ತಮ್ಮ ಮಕ್ಕಳಿಗೂ ಕಲಿಸುವ ಮೂಲಕ ಸುಸಂಸ್ಕೃತರನ್ನಾಗಿಸಬೇಕು ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲು ಸಾನ್ನಿಧ್ಯ ಸಭಾಭವನದಲ್ಲಿ ಭಾನುವಾರ ನಡೆದ ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಉದ್ಯೋಗಗಳಲ್ಲಿ ಮೀಸಲಾತಿಯ ಪರಿಣಾಮ ವಿದೇಶಗಳಿಗೆ ಹೋಗುತ್ತಿರುವ ಬುದ್ಧಿವಂತ ಬ್ರಾಹ್ಮಣ ಯುವ ಸಮುದಾಯ ಅಲ್ಲಿ ಬಹಳಷ್ಟು ಸಾಧನೆ ಮಾಡುತ್ತಿದೆ. ವೇದಗಳು ಮತ್ತು ಸಂಸ್ಕೃತಿ ಭಾರತದ ಶ್ರೇಷ್ಟತೆಗೆ ಕಾರಣವಾಗಿವೆ ಎಂದು ಹೇಳಿದರು.
ಸುರತ್ಕಲ್ ಎನ್‌ಐಟಿಕೆಯ ಸಂಸ್ಕೃತ ಪ್ರಾಧ್ಯಾಪಕ ಸುಬ್ರಹ್ಮಣ್ಯ ಮೂಡಿತ್ತಾಯ ಮಕ್ಕಳಿಗೆ ಸಂಸ್ಕಾರ ಕೊಡುವ ಬಗ್ಗೆ ಉಪನ್ಯಾಸವಿತ್ತರು.
ರುಕ್ಮಿಣಿ ಮತ್ತು ರಘುಪತಿ ಭಟ್, ಕುಮುದಾ ಮತ್ತು ನಾರಾಯಣ ಅರಿಮಣಿತ್ತಾಯ ದಂಪತಿಗಳನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಟ್ಟು ನಾರಾಯಣ ಭಟ್‌ರಿಗೆ ಆರ್ಥಿಕ ಸಹಾಯ ಮಾಡಲಾಯಿತು.
ಸಭಾದ ಅಧ್ಯಕ್ಷ ಡಾ. ಶಶಿಕುಮಾರ್, ಉಪಾಧ್ಯಕ್ಷ ವೇದವ್ಯಾಸ ಉಡುಪ, ಕಾರ‍್ಯದರ್ಶಿ ಡಾ. ಪದ್ಮನಾಭ ಭಟ್, ಸಹಕಾರ್ಯದರ್ಶಿ ಕೊರಿಯಾರ್ ಸುಬ್ರಹ್ಮಣ್ಯ ಪ್ರಸಾದ್, ಕೋಶಾಧಿಕಾರಿ ಲಕ್ಷ್ಮೀಪ್ರಸಾದ ಉಡುಪ ಉಪಸ್ಥಿತರಿದ್ದರು.
ಲೀಲಾವತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅನಂತ ಆಚಾರ್ ಶಿಬರೂರು ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.

Kinnigoli-26071602

Comments

comments

Comments are closed.

Read previous post:
Kinnigoli-26071601
ಶ್ರೀ ಗಣೇಶೋತ್ಸವ ಸಮಿತಿ: ರಾಮಣ್ಣ ಕುಲಾಲ್

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ರಾಮಣ್ಣ ಕುಲಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುರೇಶ್ ಪದ್ಮನೂರು, ಪರಮೇಶ್ವರ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್ ಕಾರ್ಯದರ್ಶಿ ಯಶೋದರ ಎಂ. ಶೆಟ್ಟಿ,...

Close