ಉತ್ತಮ ಸಂಸ್ಕಾರ ಹೇಳುವ ಕಾರ್ಯ ಶ್ಲಾಘನೀಯ

ಕಿನ್ನಿಗೋಳಿ: ಶ್ರೇಷ್ಠ ಶಿಕ್ಷಕ, ಕೃಷಿಕರಾಗಿ ಜನಮನ್ನಣೆ ಗಳಿಸಿದ ದಿ. ಕೊ. ಅ. ಉಡುಪರು ದೀಮಂತ ವ್ಯಕ್ತಿಯಾಗಿದ್ದಾರೆ. ಸಾಹಿತ್ಯಿಕ, ಸಾಂಸ್ಕ್ರತಿಕ ಚಟುವಟಿಕೆಗಳನ್ನು ಸಮಾಜದ ಮುಂದಿರಿಸಿ, ಕನ್ನಡ ನಾಡು ನುಡಿ, ಉತ್ತಮ ಸಂಸ್ಕಾರ ತಿಳಿ ಹೇಳುವ ಕಾರ್ಯ ಶ್ಲಾಘನೀಯ ಎಂದು ಮೂಡಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ವರ್ಷಂಪ್ರತಿ ನೀಡಲ್ಪಡುವ ಯುಗಪುರುಷ ಸಂಸ್ಥಾಪಕ ದಿ.ಕೊ.ಅ. ಉಡುಪ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾಸ ಸಾಹಿತಿ ಬಿ. ಕೆ. ಶ್ರೀಮತಿ ರಾವ್ ಅವರಿಗೆ ದಿ. ಕೊ.ಅ. ಉಡುಪ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ದಿ. ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಸಾಮಂತ ಸೀಮೆಯ ತಂತ್ರಿಗಳು ಶಿಬರೂರು ಮಠದ ವೇ. ಮೂ. ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ ಯೋಗೀಶ್ ರಾವ್ ಸಂಸ್ಮರಣಾ ಭಾಷಣ ಗೈದರು. ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಕುಂಭಾಶಿ ಶ್ರೀ ಆನೆಗುಡ್ಡೆ ವಿನಾಯಕ ದೇವಳ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಶುಭಾಶಂಸನೆಗೈದರು.

ಈ ಸಂದರ್ಭ ದಿ. ಡಾ. ಸತೀಶ್ ಹೊಳ್ಳ ಸ್ಮರಣಾರ್ಥ ಪರಿಸರದ ಪ್ರಾಥಮಿಕ ಶಾಲೆಯ ಅತ್ಯುತ್ತಮ ಬರವಣಿಗೆ ಸ್ಪರ್ದೆಗಳಲ್ಲಿ ವಿಜೇತರಾದ ನಮನ್, ಸೈಂಟ್ ಮೇರಿಸ್ ಶಾಲೆ, ರೂತ್, ಲಿಟ್ಲ್ ಫ್ಲವರ್ ಶಾಲೆ, ಲಿಖಿತ್ ಎಲ್ ಶ್ರೀ ದು.ಪ.ದೇ.ಹಿ.ಪ್ರಾ. ಲೆ ಉಲ್ಲಂಜೆ, ಮಿಥುನ್ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ. ಶಮ್ಯ ಆಚಾರ್ಯ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ. ನಡುಗೋಡು ಅವರಿಗೆ ಬಹುಮಾನ ವಿತರಿಸಲಾಯಿತು.
ಪಕ್ಷಿಕೆರೆ ಎಂ. ಜಿ. ರಾಮಣ್ಣ, ಆರೂರು ಲಕ್ಷ್ಮೀ ರಾವ್, ರಾಮಚಂದ್ರ ಭಟ್ ಅವರ ವತಿಯಿಂದ ಚೇತನ್, ನಿಹಾಲಾ, ಪೂಜಾ, ಸೌಮ್ಯ ಸ್ವಾತಿ ಎನ್ ದೀಕ್ಷಿತಾ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಿನ್ನಿಗೋಳಿ ದೇವರಾಯ ಮಲ್ಯ ಪ್ರತಿಷ್ಠಾನದ ವತಿಯಿಂದ ಮನು ಕಶ್ಯಪ್, ಐಶ್ವರ್ಯ ನಾಯಕ್, ಅನ್ನಪೂರ್ಣ ಪ್ರಭು, ಸಹನಾ ಕಾಮತ್, ರಚನಾ ಫ್ರಭು ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಳಕಳ ಸೀತಾರಾಮ ಭಟ್ ರಚಿತ ಚುಟುಕು ಮಾಲೆ, ಡಾ ಅಬ್ದುಲ್ ಕಲಾಂ ಮತ್ತು ಬೆಂಗಳೂರಿನ ಎಂ ವಿ ಭಟ್ ರಚಿತ ಪುಟ್ಟ ದೇಶ ಸಿಂಗಾಪುರ ಮತ್ತು ಅಮೇರಿಕಾದಲ್ಲಿ ಕಳೆದ ದಿನಗಳು ನೂತನ ಕೃತಿಗಳನ್ನು ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಮಣಿಪಾಲ ಭಾರತೀಯ ವಿಕಾಸ್ ಟ್ರಸ್ಟ್ ಆಡಳಿತ ನಿರ್ದೇಶಕ ಕೆ. ಎಂ. ಉಡುಪ ಮತ್ತು ಹಿರಿಯ ಸಾಹಿತಿ ಕೆ ಜಿ ಮಲ್ಯ ಬಿಡುಗಡೆಗೊಳಿಸಿದರು.

ಸಾಹಿತಿಗಳಾದ ಎಂ ವಿ ಭಟ್ ಬೆಂಗಳೂರು, ಎಂ. ಜಿ. ರಾಮಣ್ಣ, ಯುಗಪುರುಷದ ಪ್ರಧಾನ ಸಲಹೆಗಾರ ಡಾ. ನಯನಾಭಿರಾಮ ಉಡುಪ, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಪದ್ಮನಾಭ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಸ್ವಾಗತಿ, ವಂದಿಸಿದರು. ಅನುಷಾ ಮತ್ತು ಪು. ಗುರುಪ್ರಸಾದ್ ಭಟ್ ಸನ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಕಾರದೊಂದಿಗೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ತುಲಸೀ ಜಲಂಧರ, ಕೃಷ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.

Kinnigoli-25071604 Kinnigoli-25071605 Kinnigoli-25071606

 

Comments

comments

Comments are closed.

Read previous post:
Mulki-25071603
ಮೂಲ್ಕಿ: ಗೋಪಿನಾಥ ಪಡಂಗ ಆಯ್ಕೆ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಯುವ ಮುಂದಾಳು, ಜೆಸಿಐ ಅಂತಾರಾಷ್ಟ್ರೀಯ...

Close