ಮೆನ್ನಬೆಟ್ಟು ಹಾಲು ಉತ್ಪಾದಕರ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ರಿ.) ಕಿನ್ನಿಗೋಳಿ ಇದರ ವಾರ್ಷಿಕ ಸಭೆ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ವಾಣಿ ವೈ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮತ್ತು ಒಕ್ಕೂಟದ ವಿಸ್ತರಣಾಕಾರಿ ಅಬ್ದುಲ್ ಶಮೀರ್‌ರವರು ಹಾಲು ಒಕ್ಕೂಟವು ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ಒಕ್ಕೂಟದ ಮೂಲಕ ಸಿಗುವ ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭ ಸದಸ್ಯರಿಗೆ ಬೋನಸ್ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಅಂಬಾಕ್ಷಿ ಎಸ್. ಅಂಚನ್, ವಿಜಯ ಎಚ್. ಶೆಟ್ಟಿ, ಬೆನಡಿಕ್ಟ್ ರೇಗೊ, ವನಜ ಶೆಟ್ಟಿ, ರತ್ನಾ ಎಸ್. ಶೆಟ್ಟಿ, ಶಾರದ ಶೆಟ್ಟಿ, ಚಂದ್ರಾವತಿ, ವಾರಿಜ ಜಿ.ಮೂಲ್ಯ, ಹಾಲು ಪರೀಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸೌಮ್ಯ ವಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-27071603

Comments

comments

Comments are closed.

Read previous post:
Kinnigoli-27071602
ಕಟೀಲು ಸಸಿ ವಿತರಣೆ

ಕಿನ್ನಿಗೋಳಿ: ಕೋಟಿ ವೃಕ್ಷ ಅಭಿಯಾನದಡಿಯಲ್ಲಿ ಸಸಿ ವಿತರಣೆಯನ್ನು ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಕಟೀಲು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿತರಿಸಿದರು. ಈ ಸಂದರ್ಭ ಕಟೀಲು...

Close