ಹಳೆಯಂಗಡಿ: ಕೃತಿ ಅನಾವರಣ

ಹಳೆಯಂಗಡಿ: ಒಂದು ಸಮಾಜವನ್ನು ಗುರುತಿಸಿ, ಅದನ್ನು ಬೆಳೆಸುವ ಉದ್ದೇಶದಿಂದಲೇ ಸಂಘಟನಾತ್ಮಕವಾಗಿ ಕಟ್ಟಲು ಹಾಗೂ ಬೆಳಕಿಗೆ ಬರಲು ಸಾಹಿತ್ಯ ಅತ್ಯಂತ ಪ್ರಭಾವಶಾಲಿ, ಪ್ರತಿಯೊಂದು ಕೃತಿಯ ಹಿನ್ನಲೆಯ ಶ್ರಮವನ್ನು ಅರಿಯಬೇಕಾಗಿದೆ ಎಂದು ನಿವೃತ್ತ ಅಧ್ಯಾಪಕ ಡಾ. ಭಾಸ್ಕರ ಮಯ್ಯ ಹೇಳಿದರು.
ಅವರು ಹಳೆಯಂಗಡಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ “ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಸ್ಥಾನಿಕರ ಚಾರಿತ್ರಿಕ ಮಹತ್ವ” ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೃತಿಯ ಮೂಲ ಲೇಖಕರಾದ ಡಾ. ವಸಂತ ಮಾಧವ ಕೊಡಂಚರನ್ನು ಸಮ್ಮಾನಿಸಲಾಯಿತು.
ಕನ್ನಡಕ್ಕೆ ಅನುವಾದ ಮಾಡಿದ ಮಣಿಪಾಲದ ಟಿ.ಎಂ.ಎ ಪೈ ಶಿಕ್ಷಕರ ತರಬೇತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ ಮಹಾಬಲೇಶ್ವರ ರಾವ್ ಮಾತನಾಡಿ, ಪ್ರತಿಯೊಂದು ಸಾಹಿತ್ಯದ ಭಾಷೆ-ನೇರ-ಸರಳತೆಯಿಂದ ಕೂಡಿದಲ್ಲಿ ಅದು ಅಧ್ಯಯನಶೀಲವಾಗಿರಲು ಸಾಧ್ಯವಿದೆ. ಡಾ.ವಸಂತ ಮಾಧವರು ಇಂತಹ ಕೃತಿಕಾರರಾಗಿದ್ದಾರೆ. ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಹಿನ್ನಲೆಯನ್ನು ಆಧಾರವಾಗಿ ನೀಡುವ ಅವರ ಪಠ್ಯಕ್ರಮ ಅನುಕರಣೀಯ ಎಂದರು.
ಶ್ರೀ ಕ್ಷೇತ್ರ ಪಾವಂಜೆಯ ಧರ್ಮದರ್ಶಿ ಯಾಜಿ ಡಾ. ನಿರಂಜನ ಭಟ್ ಉಪಸ್ಥಿತರಿದ್ದರು.
ಡಾ. ಹರಪ್ರಸಾದ್ ತುದಿಯಡ್ಕ ಸ್ವಾಗತಿಸಿದರು, ಶ್ಯಾಮಲಾ ಸಮ್ಮಾನ ಪತ್ರ ವಾಚಿಸಿದರು, ದೇವಳದ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ವಂದಿಸಿದರು. ಸಮಿತಿಯ ಸಂಘಟನಾ ಕಾರ್ಯದರ್ಶಿ ಎಸ್. ಸದಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-29071602 Kinnigoli-29071603

Comments

comments

Comments are closed.

Read previous post:
Kinnigoli-29071601
ಜೀವನದ ಮೌಲ್ಯವನ್ನು ಅರಿಯಲು ಪ್ರಯತ್ನಿಸಿ

ಮೂಲ್ಕಿ :  ಜೀವನದ ಮೌಲ್ಯವನ್ನು ಅರಿಯದೇ ಇಂದು ಸಮಾಜದಲ್ಲಿ ಕಗ್ಗತ್ತಲಿನತ್ತ ಸಾಗುತ್ತಿರುವುದು ಅಪಾಯಕಾರಿ, ಶೀಕ್ಷಣದ ಮೂಲಕ ಭಾವನಾತ್ಮಕತೆಯ ಸಮಾಜವಾಗಿ ಅಂತಃಸತ್ವದ ಕಡೆಗೆ ಸ್ಥಾನಿಕ ಬ್ರಾಹ್ಮಣರು ಸಾಗುತ್ತಿರುವುದು ಶ್ಲಾಘನೀಯ, ವೃದ್ಧರು...

Close