ಮೂಲ್ಕಿ: ಬೀಳ್ಕೋಡುಗೆ ಕಾರ್ಯಕ್ರಮ

ಮೂಲ್ಕಿ: ಸರಕಾರಿ ಅಧಿಕಾರಿಗಳು ಪ್ರಾಮಾಣಿಕರಾಗಿ ಮತ್ತು ಸಹೃದಯರಾಗಿದ್ದಲ್ಲಿ ಮಾತ್ರ ಅವರ ಸೇವೆ ಎಲ್ಲೆಡೆ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ ಹೇಳಿದರು.
ಮೂಲ್ಕಿ ಪೋಲೀಸ್ ಠಾಣೆಯ ಸಿಬ್ಬಂದಿಗಳ ವತಿಯಿಂದ ಠಾಣಾ ನಿರೀಕ್ಷಕರಾದ ರಾಮಚಂದ್ರ ನಾಯ್ಕ್, ಎ.ಎಸ್.ಐ ರಮೇಶ್ ಮತ್ತು ಕಾನ್‌ಸ್ಟೇಬಲ್ ಸತೀಶ್ ರವರ ವರ್ಗಾವಣೆಯ ಪ್ರಯುಕ್ತ ಬೀಳ್ಕೋಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಠಾಣಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ರಾಮಚಂದ್ರ ನಾಯ್ಕ್ ಅವರು ಉತ್ತಮ ನಡವಳಿಕೆಯಿಂದ ಜನರ ಅಭಿಮಾನ ಗಳಿಸಿದ್ದಾರೆ ಎಂದರು.
ಈ ಸಂದರ್ಭ ನಿರೀಕ್ಷಕ ರಾಮಚಂದ್ರ ನಾಯ್ಕ್ ರವರನ್ನು ಠಾಣೆಯ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು ಹಾಗೂ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಕೃಷ್ಣ ಮತ್ತು ಹೋಂಗಾರ್ಡ್ ಘಟಕಾಧಿಕಾರಿ ಮನ್ಸೂರ್ ಅವರನ್ನು ಅಭಿನಂದಿಸಿದರು.
ಮೂಲ್ಕಿ ನಿರೀಕ್ಷಕ ಅನಂತ ಪದ್ಮನಾಭ, ಉಪ ನಿರೀಕ್ಷಕ ಆರ್ ಸಾಂತಪ್ಪ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಹೆಡ್ ಕಾನ್‌ಸ್ಟೇಬಲ್ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-290716034

Comments

comments

Comments are closed.

Read previous post:
Kinnigoli-29071603
ಹಳೆಯಂಗಡಿ: ಕೃತಿ ಅನಾವರಣ

ಹಳೆಯಂಗಡಿ: ಒಂದು ಸಮಾಜವನ್ನು ಗುರುತಿಸಿ, ಅದನ್ನು ಬೆಳೆಸುವ ಉದ್ದೇಶದಿಂದಲೇ ಸಂಘಟನಾತ್ಮಕವಾಗಿ ಕಟ್ಟಲು ಹಾಗೂ ಬೆಳಕಿಗೆ ಬರಲು ಸಾಹಿತ್ಯ ಅತ್ಯಂತ ಪ್ರಭಾವಶಾಲಿ, ಪ್ರತಿಯೊಂದು ಕೃತಿಯ ಹಿನ್ನಲೆಯ ಶ್ರಮವನ್ನು ಅರಿಯಬೇಕಾಗಿದೆ...

Close