ತುಳು ಸಂಸ್ಕೃತಿಯ ಭವಿಷ್ಯ ಯುವಜನರಲ್ಲಿದೆ

ಮೂಲ್ಕಿ: ತುಳು ಸಂಸ್ಕೃತಿಯನ್ನು ಭವಿಷ್ಯದಲ್ಲಿ ಉಳಿಸುವ ಬಹುದೊಡ್ಡ ಜವಬ್ದಾರಿ ಯುವಜನರಲ್ಲಿದೆ, ಕೌಟುಂಬಿಕ ಸಂಬಂಧಗಳು ಆಂಟಿ-ಅಂಕಲ್‌ಗೆ ಸೀಮಿತವಾಗುತ್ತಿರುವುದು ವಿಪರ್ಯಾಸವಾಗಿದೆ. ಆಧುನಿಕ ಪರ್ವಕಾಲದಲ್ಲಿ ನಮ್ಮ ತುಳು ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಸಮ್ಮೇಳನದ ಮೂಲಕ ಪೂರಕವಾಗಿ ಯುವ ಸಮಾಜವನ್ನು ಸಂಘಟಿಸುವುದು ಆಸಕ್ತಿ ಬೆಳೆಸಲು ಸಹಕಾರಿ ಎಂದು ಉದ್ಯಮಿ ಸಂದೇಶ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಟೈಮ್ಸ್ ಆಫ್ ಕುಡ್ಲದ ತುಳು ಪತ್ರಿಕೆದ ನಾಲ್ಕನೇ ವರ್ಷದ ನೆನಪಿಗಾಗಿ ಮೂಲ್ಕಿಯಲ್ಲಿ ಆಗಸ್ಟ್ 13 ಮತ್ತು 14 ರಂದು ನಡೆಯುವ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಪೂರ್ವ ಭಾವಿಯಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ ತುಳು ಸಾಂಸ್ಕೃತಿಕ ಸ್ಪರ್ಧೆಯನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ ಮಾತನಾಡಿ, ತುಳು ಭಾಷೆ ಸಂಸ್ಕೃತಿಯನ್ನು ಬೆಳೆಸುವ ಹಿನ್ನಲೆಯಲ್ಲಿ ವಿವಿಧ ಯೋಜನೆ ಹಾಗೂ ಯೋಚನೆಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ತುಳು ಸಮ್ಮೇಳನವು ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಉತ್ತಮ ವೇದಿಕೆಯಾಗಲಿದೆ ಎಂದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್, ಮೂಲ್ಕಿ ಲಯನ್ಸ್ ಅಧ್ಯಕ್ಷ ಸುಜಿತ್ ಎಸ್. ಸಾಲ್ಯಾನ್, ರೋಟರಿ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ, ಕಾರ್ಯಕ್ರಮ ಸಂಯೋಜಕ ರವಿಚಂದ್ರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶೋಧಾ ಕೇಶವ, ಕೋಶಾಧಿಕಾರಿ ರತ್ನಾ ರಂಜನ್, ಶಾಂಭವಿ ಶೆಟ್ಟಿ, ಭಾರತೀ ರೈ, ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗಾರರಾದ ಉಡುಪಿ ಪ್ರಾಚ್ಯ ಸಂಚಯ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಮತ್ತು ಗೋವಾ ಬಂಟರ ಸಂಘದ ಮಾಜಿ ಅಧ್ಯಕ್ಷ ಶಶಿ ಶೆಟ್ಟಿಯವರನ್ನು ಗೌರವಿಸಲಾಯಿತು.
ಸಮಿತಿಯ ಪ್ರಧಾನ ಸಂಚಾಲಕ ಎಸ್.ಆರ್.ಬಂಡಿಮಾರ್ ಪ್ರಸ್ತಾವನೆಗೈದರು. ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಕೆರೆಕಾಡು ನಿರೂಪಿಸಿದರು. ರವಿಚಂದ್ರ ವಂದಿಸಿದರು.

Kinnigoli-290716035

Comments

comments

Comments are closed.

Read previous post:
Kinnigoli-290716034
ಮೂಲ್ಕಿ: ಬೀಳ್ಕೋಡುಗೆ ಕಾರ್ಯಕ್ರಮ

ಮೂಲ್ಕಿ: ಸರಕಾರಿ ಅಧಿಕಾರಿಗಳು ಪ್ರಾಮಾಣಿಕರಾಗಿ ಮತ್ತು ಸಹೃದಯರಾಗಿದ್ದಲ್ಲಿ ಮಾತ್ರ ಅವರ ಸೇವೆ ಎಲ್ಲೆಡೆ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್...

Close