ಜೀವನದ ಮೌಲ್ಯವನ್ನು ಅರಿಯಲು ಪ್ರಯತ್ನಿಸಿ

ಮೂಲ್ಕಿ :  ಜೀವನದ ಮೌಲ್ಯವನ್ನು ಅರಿಯದೇ ಇಂದು ಸಮಾಜದಲ್ಲಿ ಕಗ್ಗತ್ತಲಿನತ್ತ ಸಾಗುತ್ತಿರುವುದು ಅಪಾಯಕಾರಿ, ಶೀಕ್ಷಣದ ಮೂಲಕ ಭಾವನಾತ್ಮಕತೆಯ ಸಮಾಜವಾಗಿ ಅಂತಃಸತ್ವದ ಕಡೆಗೆ ಸ್ಥಾನಿಕ ಬ್ರಾಹ್ಮಣರು ಸಾಗುತ್ತಿರುವುದು ಶ್ಲಾಘನೀಯ, ವೃದ್ಧರು ಇಂದು ಮನೆಯಲ್ಲಿ ಜೀವನದ ನಡೆಸದೇ ಪ್ರತ್ಯೇಕ ವ್ಯವಸ್ಥೆಯಲ್ಲಿ ಬದುಕುತ್ತಿರುವುದು ಘೋರ ದುರಂತ. ಕೌಟುಂಬಿಕವಾಗಿ ಜೀವನ ಅನುಭವವವನ್ನು ಮುಂದಿನ ಪೀಳಿಗೆಗೆ ರವಾನಿಸಿದಲ್ಲಿ ಮಾತ್ರ ತಂದೆ ಮಕ್ಕಳ ನಡುವಿನ ಕಂದಕವನ್ನು ದೂರ ಮಾಡಬಹುದು ಎಂದು ಖ್ಯಾತ ವಿಮರ್ಶಕ ಎ. ಈಶ್ವರಯ್ಯ ಹೇಳಿದರು.
ಅವರು ಮೂಲ್ಕಿ ಬಳಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ಭಾನುವಾರ ನಡೆದ ಪಂಡಿತ ಎಚ್. ಸುಬ್ರಾಯ ಭಟ್ಟ ಪ್ರಶಸ್ತಿಯನ್ನು ವೇದೋಕ್ತ ಸಮ್ಮಾನದ ಮೂಲಕ ಸ್ವೀಕರಿಸಿ ಮಾತನಾಡಿದರು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಕ್ಷೇತ್ರ ಪಾವಂಜೆಯ ಧರ್ಮದರ್ಶಿ ಯಾಜಿ ಡಾ. ನಿರಂಜನ ಭಟ್ ಆಶೀರ್ವಚನ ನೀಡಿ ಪಾವಂಜೆ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.
ಪಂಡಿತ ಎಚ್. ಸುಬ್ರಾಯ ಭಟ್ಟ ಸ್ಮಾರಕ ವೇದ ಪ್ರಚಾರ ಸಮಿತಿಯ ಸಂಯೋಜನೆಯಲ್ಲಿ ಸ್ಥಾನಿಕ ಬ್ರಾಹ್ಮಣ ಸಮಾಜದ ಹಿರಿಯ ಸಾಧಕರನ್ನು ವೇದೋಕ್ತವಾಗಿ ಪಂಡಿತ ಎಚ್. ಸುಬ್ರಾಯ ಭಟ್ಟ ಪ್ರಶಸ್ತಿಯನ್ನು ಶೆಡ್ಡೆ ಪ್ರಭಾಕರ ರಾವ್, ಎ. ಈಶ್ವರಯ್ಯ, ಕಟೀಲು ರಾಮಪ್ಪ ಉಪಾಧ್ಯಾಯ, ಕಟಪಾಡಿ ಶಿವ ರಾವ್, ಅಡೂರು ಸಂಜೀವ ರಾವ್, ಕುಕ್ಕಿಕಟ್ಟೆ ರಾಧಾಕೃಷ್ಣ ರಾವ್, ಕರಂಬಳ್ಳಿ ವೆಂಕಟ ರಾವ್, ಮೋಹನ ಹೆಬ್ಬಾರ್ ಕಬ್ಬಿನಾಲೆ, ಡಾ. ವೆಂಕಪ್ಪಯ್ಯ ಕಿನ್ನಿಕಂಬಳ, ರತ್ಮಮ್ಮ ನಂದಿಕೂರು, ಪ್ರಭಾವತಿ ರಾಮಚಂದ್ರ ಭಟ್, ಪ್ರಭಾವತಿ ಭಾಸ್ಕರ ರಾವ್, ಶಾಂಭವಿ ರಂಗಯ್ಯ ಹೆಬ್ಬಾರ್ ಮುದ್ರಾಡಿ, ಹೇರಂಜಾಲು ಸೀತಾರಾಮ ಮೇರ್ಟ, ಶಂಕರನಾರಾಯಣ ಹೆಬ್ಬಾರ್ ಕಬ್ಬಿನಾಲೆ, ಮಾಧವ ರಾವ್ ಹೊರನಾಡು, ವಿಷ್ಣುಮೂರ್ತಿ ಹೆಬ್ಬಾರ್ ಕಬ್ಬಿನಾಲೆ, ರವೀಂದ್ರ ರಾವ್ ಕುಂಭಾಶಿ, ಎಲ್ಲೂರು ಜಗದೀಶ ರಾವ್, ಕೊಕ್ರಾಡಿ ರಾಮ ರಾವ್‌ರವರನ್ನು ವೇದೋಕ್ತವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದೇವಳದ ತಂತ್ರಿ ದಿವಾಕರ ಭಟ್, ದರ್ಶನ ಪಾತ್ರಿ ಅಡೂರು ವೆಂಕಪ್ಪಯ್ಯ ಮೇರ್ಟ,ಶುಂಠಿಪಾಡಿ ಮೋಹನ್‌ರಾವ್, ಪ್ರಭಾಕರ ರಾವ್, ಪ್ರಸನ್ನಕುಮಾರ್ ಎಂ. ಶಕುಂತಲಾ ಭಟ್, ಇಂದಿರಾ ಹರಿಪ್ರಸಾದ್, ಪ್ರಪುಲ್ಲ ಪ್ರಭಾಕರರಾವ್, ರೂಪಾರಾಣಿ, ಹೇಮಾ ಎಸ್. ರಾವ್, ಪದ್ಮಿನಿ ಆರ್. ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪಂಡಿತ ಎಚ್. ಸುಬ್ರಾಯ ಭಟ್ಟ ಸ್ಮಾರಕ ವೇದ ಪ್ರಚಾರ ಸಮಿತಿಯ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಸ್ವಾಗತಿಸಿದರು, ಶ್ಯಾಮಲಾ ಸಮ್ಮಾನ ಪತ್ರ ವಾಚಿಸಿದರು, ದೇವಳದ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ವಂದಿಸಿದರು. ಸಮಿತಿಯ ಸಂಘಟನಾ ಕಾರ್ಯದರ್ಶಿ ಎಸ್. ಸದಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-29071601

Comments

comments

Comments are closed.

Read previous post:
Kinnigoli-270716045
ಕಿನ್ನಿಗೋಳಿ ಬಾಪೂಜಿ ಸೇವಾ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ: ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಬುಧವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಯಲ್ಲಿ ಪಂಚಾಯಿತಿ 100 ಬಾಪೂಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಬಾಪೂಜಿ ಕೇಂದ್ರದ ಬಗ್ಗೆ ಮಾತನಾಡಿ ರಾಜ್ಯ...

Close