ಕಿನ್ನಿಗೋಳಿ : ಆಟಿ ಕಷಾಯ ವಿತರಣೆ

ಕಿನ್ನಿಗೋಳಿ : ಕಿನ್ನಿಗೊಳಿ ಸಜ್ಜನ ಬಂಧುಗಳು ವತಿಯಿಂದ ಆಟಿ ಅಮಾವ್ಯಾಸೆ ಪ್ರಯುಕ್ತ ಉಚಿತವಾಗಿ ಹಾಲೆ ಮರದ ತೊಗಟೆಯ ಕಷಾಯ ನೀಡುವ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನೀಡಲಾಯಿತು.
ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಮಾತನಾಡಿ ವೈಜ್ಞಾನಿಕವಾಗಿ ಹಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವ ನಂಬಿಕೆ ತುಳುನಾಡಿನ ಎಲ್ಲಾ ವರ್ಗದ ಹಾಗೂ ಧರ್ಮದ ಜನರಲ್ಲಿದೆ. ಎಂದು ಹೇಳಿದರು.
ಈ ಸಂದರ್ಭ ಸಾರ್ವಜನಿಕರಿಗೆ ಕಷಾಯ ತಯಾರಿಸಿದ ಕೊಲ್ಲೂರು ಶ್ರೀಪಾದ ಭಟ್ ಅವರನ್ನು ಗೌರವಿಸಲಾಯಿತು.
ಸುಮಾರು 500 ಜನರು ಕಷಾಯದ ಪ್ರಯೋಜನ ಪಡೆದುಕೊಂಡರು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಸಂತೋಷ್ ಕುಮಾರ್ ಶೆಟ್ಟಿ, ಸಜ್ಜನ ಬಂಧುಗಳು ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಜನಾರ್ಧನ ಕಿಲೆಂಜೂರು, ಪ್ರಕಾಶ್ ಆಚಾರ್, ದೇವದಾಸ ಮಲ್ಯ, ಮಿಥುನ್ ಕೊಡೆತ್ತೂರು, ಶಕುನ ಉಡುಪ, ದಿನೇಶ್, ಲೀಲಾಧರ ಶೆಟ್ಟಿ, ರವಿ ಶೆಟ್ಟಿ ಅತ್ತೂರು, ದಾಮೋದರ ಶೆಟ್ಟಿ, ನಿಶಾಂತ್ ಕಿಲೆಂಜೂರು, ಹರಿಪ್ರಸಾದ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-02081607 Kinnigoli-02081608 Kinnigoli-02081609 Kinnigoli-020816007 Kinnigoli-020816010 Kinnigoli-020816011

Comments

comments

Comments are closed.

Read previous post:
Kateel-0108201601
ವನ ಮಹೋತ್ಸವ ಮತ್ತು ಸಸಿ ವಿತರಣೆ

ಕಟೀಲು : ಎಕ್ಕಾರು ಗ್ರಾಮ ಪಂಚಾಯಿತಿ ಮಂಗಳೂರು ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವನ ಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯವನ್ನು ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ...

Close